ಗಡಿ ವಿವಾದ ಮಾತುಕತೆ ಸಿದ್ದ ಎಂದು ಮತ್ತೊಂದು ಕ್ಯಾತೆ ತೆಗೆದ ಮಹಾ ಸಿಎಂ

ಮುಂಬೈ,ನ.24-ಗಡಿ ವಿವಾದವನ್ನೇ ಮುಂದಿಟ್ಟುಕೊಂಡು ಸದಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಹಾರಾಷ್ಟ್ರ ಇದೀಗ ಬೆಳಗಾವಿ ಗಡಿ ವಿಷಯದಲ್ಲಿ ಮತ್ತೊಂದು ಕ್ಯಾತೆ ತೆಗೆದಿದೆ. ಹಲವು ದಶಕಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಕಗ್ಗಂಟಾಗಿಯೇ ಪರಿಣಮಿಸಿರುವ ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಾವು ಬದ್ದ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಕರ್ನಾಟಕ ಸರ್ಕಾರ ಬಯಸಿದರೆ ಗಡಿ ವಿವಾದವನ್ನು ಮಾತುಕತೆಯಿಂದಲೇ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲಾಗುವುದು. ಇದಕ್ಕೆ ಅಲ್ಲಿನ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದರ ಮೇಲೆ ಅವಲಂಬಿಸಿದೆ ಎಂದಿದ್ದಾರೆ. ವಿಶೇಷವೆಂದರೆ […]

41 ದಿನಗಳ ನಂತರ ಸಂಪುಟ ವಿಸ್ತರಣೆಗೆ ಮುಂದಾದ ಮಹಾ ಸಿಎಂ ಶಿಂಧೆ

ಮುಂಬೈ, ಆ.9 – ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ 41 ದಿನಗಳ ನಂತರ ಇಂದು ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ. ಜೂನ್ 30 ರಂದು ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದಕ್ಷಿಣ ಮುಂಬೈನ ರಾಜಭವನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆದ ಸಮಾರಂಭ 6 ಜನ ಮಾತ್ರ ಸಂಪುಟ ಸೇರಲಿದ್ದಾರೆ.ಶಿಂಧೆ ಗುಂಪಿನಿಂದ ಭರತ್ ಗೊಗವಾಲೆ ಮತ್ತು ಶಂಭುರಾಜ್ ದೇಸಾಯಿ […]

ದೆಹಲಿಯಲ್ಲಿ ಶಿವಸೇನೆ ಸಂಸದರನ್ನು ಭೇಟಿ ಮಾಡಲಿರುವ ಸಿಎಂ ಶಿಂಧೆ

ನವದೆಹಲಿ, ಜು.19- ಶಿವಸೇನೆ ಸಂಸದೀಯ ಪಕ್ಷದಲ್ಲಿ ವಿಭಜನೆ ಸನ್ನಿಹಿತವಾಗುತ್ತಿರುವ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ದೆಹಲಿಯಲ್ಲಿ ಪಕ್ಷದ ಸಂಸದರನ್ನು ಭೇಟಿ ಮಾಡಲಿದ್ದಾರೆ. ಉದ್ಧವ್ ಠಾಕ್ರೆ ಅವರು ಸಲ್ಲಿಸಿರುವ 16 ಶಾಸಕರ ವಿರುದ್ಧದ ಅನರ್ಹತೆ ಅರ್ಜಿ ವಿಚಾರಣೆ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಇದರ ಕುರಿತು ಚರ್ಚೆಗೆ ದೆಹಲಿಗೆ ಆಗಮಿಸಿರುವ ಏಕನಾಥ್ ಶಿಂಧೆ, ಶಿವಸೇನೆಯ ಸಂಸದರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶಿವಸೇನೆ ಮುಖ್ಯ ನಾಯಕರಾಗಿ ಪಟ್ಟಕ್ಕೇರಿದ ದಿನದ ಬಳಿಕ ಶಿಂಧೆ ಮಂಗಳವಾರ […]