ಜೆಡಿಯು ಪಕ್ಷದಲ್ಲಿ ಮೂಡಿದ ಒಡಕು

ಪಾಟ್ನಾ,ಜ.27- ಎನ್‍ಡಿಎ ಮೈತ್ರಿಕೂಟದಿಂದ ಹೊರಬಿದ್ದು ಯುಪಿಎ ಮೈತ್ರಿಯೊಂದಿಗೆ ಬಿಹಾರದಲ್ಲಿ ಸರ್ಕಾರ ರಚಿಸಿರುವ ಜೆಡಿಯುಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾ ಅವರು ಮುಖ್ಯಮಂತ್ರಿ ನಿತೀಶ್‍ಕುಮಾರ್ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿತೀಶ್ ನೀಡಿರುವ ಸೂಚನೆಯನ್ನು ಕಡೆಗಣಿಸಿರುವ ಕುಶ್ವಾ ತನ್ನ ಪಾಲಿನ ಆಸ್ತಿ ನೀಡದ ವಿನಾಃ ಪಕ್ಷ ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಕುಶ್ವಾ ಅವರು ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹ ಕೇಳಿ […]

ನಿತೀಶ್ ಕುಮಾರ್ ಬಳಿ ಕೇವಲ 75.53 ಲಕ್ಷ ಮೌಲ್ಯದ ಆಸ್ತಿ

ಪಾಟ್ನಾ, ಜ.1- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಳಿ ಇರುವುದು ಕೇವಲ 75.53 ಲಕ್ಷ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ. ಆದರೆ ಸಚಿವರು ಸಿಎಂಗಿಂತ 10 ಪಟ್ಟಗೂ ಹೆಚ್ಚು ಸಿರಿವಂತರಾಗಿದ್ದಾರೆ, ಕ್ಯಾಲೆಂಡರ್ ವರ್ಷ (2022) ದ ಕೊನೆಯ ದಿನದಂದು (ಡಿ.31) ರಾತ್ರಿ ಬಿಹಾರ ಸರ್ಕಾರದ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ, ಸಿಎಂ ಬಳಿ 28,135 ರೂಪಾಯಿ ನಗದು ಮತ್ತು ಸುಮಾರು 51,856 ರೂಪಾಯಿಗಳನ್ನು ವಿವಿಧ […]

ಮುಂದುವರೆದ ನಿತೀಶ್-ಪ್ರಶಾಂತ್ ವಾಕ್ಸಾಮರ

ನವದೆಹಲಿ,ಅ.22- ಬಿಹಾರ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹಾಗೂ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡುವಿನ ಮುಸುಕಿನ ಗುದ್ದಾಟ ಮತ್ತೆ ಮುಂದುವರೆದಿದೆ. ನಿತೀಶ್‍ಕುಮಾರ್ ಅವರು ಇನ್ನು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಪ್ರಶಾಂತ್ ಕಿಶೋರ್ ಹೇಳಿಕೆ ನಿತೀಶ್‍ಕುಮಾರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಶಾಂತ್ ಯೋಗ್ಯತೆ ಏನು ಎಂದು ನನಗೆ ಗೊತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಇಬ್ಬರ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ಜೆಡಿಯು ಎನ್‍ಡಿಎ ಮೈತ್ರಿ ಮುರಿದುಕೊಂಡು ಮಹಾಘಟಬಂಧನ್ ಸರ್ಕಾರ ರಚನೆ ಮಾಡಿದ ನಂತರ ನಿತೀಶ್ ಹಾಗೂ ಪ್ರಶಾಂತ್ ನಡುವೆ […]

ಸಿಎಂ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಸಂಸದನಿಗೆ 3 ವರ್ಷ ಜೈಲು

ಗೆಹನಾಬಾದ್,ಜು.31- ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಮಾಜಿ ಸಂಸದರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ. ಗೆಹನಾಬಾದ್ ಜಿಲ್ಲಾ ನ್ಯಾಯಾಲಯ ಆರ್‍ಎಲ್‍ಎಸ್‍ಪಿ ಸಂಸದ ಅರುಣ್‍ಕುಮಾರ್ ಅವರಿಗೆ ಶಿಕ್ಷೆ ವಿಧಿಸಿದೆ. 2015ರ ಜೂನ್‍ನಲ್ಲಿ ಅರುಣ್‍ಕುಮಾರ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಬರ್ಹಮತ್ತು ಮೊಕಂ ಪ್ರದೇಶದಲ್ಲಿ ಭೂಮಿಹಾರ್ಸ್‍ಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ. ನಾವೇನು ಬಳೆ, ಸೀರೆ ತೊಟ್ಟಿಲ್ಲ. ಮುಖ್ಯಮಂತ್ರಿಗಳ ಎದೆಮೂಳೆಗಳನ್ನು ಮುರಿಯುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಕುರಿತು […]