ಸಹಕಾರ ಇಲಾಖೆಯ ಅವ್ಯವಹಾರ ನಿಯಂತ್ರಿಸಲು ಹೊಸ ಮಾರ್ಗಸೂಚಿ : ಸಚಿವ ಸೋಮಶೇಖರ್

ಬೆಂಗಳೂರು,ಫೆ.15- ಸಹಕಾರ ಇಲಾಖೆಯಲ್ಲಿ ಖಾಸಗಿ ಲೆಕ್ಕ ಪರಿಶೋಧಕರಿಂದಾಗಿ ಕೆಲ ಅವ್ಯವಹಾರಗಳಾಗುತ್ತಿದ್ದು, ಅದಕ್ಕೆ ನಿಯಂತ್ರಣ ತರಲು ಮುಂದಿನ ಅಧಿವೇಶನದ ವೇಳೆಗೆ ಕಠಿಣ ನಿಯಮಾವಳಿಗಳನ್ನೊಳಗೊಂಡ ಹೊಸ ಮಾರ್ಗಸೂಚಿಗಳನ್ನು ರಚಿಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಗೆ ಅಧಿಕಾರಿಗಳ ಕೊರತೆ ಇದೆ. ಅದಕ್ಕಾಗಿ 402 ಲೆಕ್ಕ ಪರಿಶೋಧಕರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್‍ನಿಂದಾಗಿ ಯಾವುದೇ ನೇಮಕಾತಿಗೆ ಅವಕಾಶವಿರಲಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಗುವ ಭರವಸೆ ಇದೆ ಎಂದರು. ಸಹಕಾರ ಇಲಾಖೆಯಲ್ಲಿ 1700 ಲೆಕ್ಕ ಪರಿಶೋಧಕರು ನೋಂದಾಯಿಸಿಕೊಂಡಿದ್ದಾರೆ. ಒಬ್ಬರು […]