ಕೊಯಮತ್ತೂರಿನ ದೇವಸ್ಥಾನದ ಬಳಿ ಕಾರ್ ಸ್ಫೋಟ, ಉಗ್ರರ ಕೈವಾಡದ ಶಂಕೆ

ನವದೆಹಲಿ,ಅ.24-ಕೊಯಮತ್ತೂರಿನ ದೇವಸ್ಥಾನದ ಬಳಿ ಸಂಭವಿಸಿದ ಕಾರ್ ಸ್ಫೋಟ ದ ಪ್ರಕರಣದ ನಂತರ ತಮಿಳುನಾಡಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾರ್ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ತಮಿಳುನಾಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಉಗ್ರರು ತಮಿಳುನಾಡಿನಲ್ಲಿ ದುಷ್ಕøತ್ಯ ನಡೆಸುವ ಸಾಧ್ಯತೆ ಇರುವ ಕಾರಣ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾರು ಸ್ಫೋಟಿಸಿ ಮೃತಪಟ್ಟ ಮುಬಿನಾ ಅವರನ್ನು 2019ರಲ್ಲಿ ಐಸಿಸ್ ಸಂಪರ್ಕದ ಆರೋಪದ ಮೇಲೆ […]