9.4 ಲಕ್ಷ ಮೌಲ್ಯದ ನಾಣ್ಯಗಳು ವಶ

ಮುಂಬೈ,ಫೆ.5- ದೆಹಲಿ ಮತ್ತು ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಲಾಡ್ ನಿವಾಸಿಯೊಬ್ಬರ ಒಡೆತನದ ಕಾರಿನಲ್ಲಿ 9.4 ಲಕ್ಷ ಮೌಲ್ಯದ ನಾಣ್ಯಗಳನ್ನು ವಶಪಡಿಸಿಕೊಂಡು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಲಕ್ಷಾಂತರ ಮೌಲ್ಯದ ನಾಣ್ಯಗಳನ್ನು ಹೊಂದಿದ್ದ ಆರೋಪಿಯನ್ನು ಜಿಗ್ನೇಶ್ ಗಾಲಾ ಎಂದು ಗುರುತಿಸಲಾಗಿದೆ.ಗಾಲಾನಿಂದ ವಶಪಡಿಸಿಕೊಳ್ಳಲಾಗಿರುವ ನಾಣ್ಯಗಳು ಅಸಲಿಯೋ ನಕಲಿಯೋ ಎಂದು ಟಂಕಸಾಲೆಯಿಂದ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ನೋಟು ಪ್ರಕರಣದ ತನಿಖೆ ನಡೆಸುತ್ತಿದ್ದ ದೆಹಲಿ ವಿಶೇಷ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರೂ ಆ ಸಂದರ್ಭದಲ್ಲಿ ಮಲಾಡ್ […]