ಗುಂಡಿಗಂಡಾಂತರ : ಕುಸಿದು ಬೀಳುತ್ತಲೇ ಇವೆ ಬೆಂಗಳೂರಿನ ರಸ್ತೆಗಳು

ಬೆಂಗಳೂರು,ಜ.21- ನಗರದಲ್ಲಿ ರಸ್ತೆ ಕುಸಿದು ಬೀಳುವ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಬ್ರಿಗೇಡ್ ರೋಡ್, ಮಹಾಲಕ್ಷ್ಮಿ ಲೇಔಟ್‍ಗಳಲ್ಲಿ ರಸ್ತೆ ಗುಂಡಿ ಕುಸಿದುಬಿದ್ದ ರೀತಿಯಲ್ಲೇ ನಗರದ ರಸ್ತೆಯಲ್ಲಿ ಗುಂಡಿ ಗಂಡಾಂತರ ಕಾಣಿಸಿಕೊಂಡಿದೆ. ಇಟ್ಟುಮಡು ಮುಖ್ಯ ರಸ್ತೆಯಲ್ಲಿ ಮಾರುತಿ ನಗರದ ರಸ್ತೆ ಕುಸಿದು ಐದು ಅಡಿಗೂ ಹೆಚ್ಚು ಕಂದಕ ಬಿದ್ದಿರುವುದು ಕಂಡು ಬಂದಿದೆ. ಕಳೆದ ಒಂದು ತಿಂಗಳಿನಿಂದ ಸ್ವಲ್ಪ ಸ್ವಲ್ಪ ರಸ್ತೆ ಕುಸಿಯುತ್ತಿದ್ದರೂ ಸಂಬಂಧಪಟ್ಟವರು ಯಾವುದೆ ಕ್ರಮ ಕೈಗೊಳ್ಳದ ಕಾರಣ ರಸ್ತೆ ಇದೀಗ ಸಂಪೂರ್ಣ ಕುಸಿದಿದೆ. ರಸ್ತೆ ಕುಸಿದಿದ್ದರೂ ಸ್ಥಳಕ್ಕೆ ಇದುವರೆಗೂ […]