ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಕಬ್ಜ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಮನೆತನದ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಸ್ಥಾಪನೆಗೊಳ್ಳುವ ಸಮಯ. ಆಗ ಮತ್ತೆ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲೇ ಹಿಡಿದಿಟ್ಟುಕೊಳ್ಳುವ ಹಪಹಪಿ ರಾಜರುಗಳದ್ದಾದರೆ, ಹೊಸದಾಗಿ ಜಾರಿಯಾದ ಪ್ರಜಾಪ್ರಭುತ್ವವನ್ನೆ ತನ್ನ ಅಂಕೆಯಲ್ಲಿಟ್ಟುಕೊಂಡು ಆಡಿಸಬೇಕೆಂಬ ಭೂಗತ ಲೋಕದ ಬಯಕೆ ಮತ್ತೊಂದು ಕಡೆ. ಒಟ್ಟಾರೆ ಇಬ್ಬರ ನಡುವಿನ ಘರ್ಷಣೆ ತಾರಕಕ್ಕೇರಿ ಶ್ರೀಮಂತ ಕೋಟೆ ಅಮರಾಪುರ ವನ್ನು ಯಾರು ಕಬ್ಜ ಮಾಡುತ್ತಾರೆ ಅನ್ನೋದು ಸದ್ಯ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ನ ಕಬ್ಜ ಮಾಡುತ್ತಿರುವ ಕಬ್ಜ ಚಿತ್ರದ ಒನ್ ಲೈನ್ ಸ್ಟೋರಿ. ಪ್ರಚಾರಕ್ಕಾಗಿ ಸಿದ್ದರಾಮಯ್ಯ ಗಿಮಿಕ್ […]

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಗೂ ಮೀರಿ ಹರಿದುಬಂತು ಆದಾಯ

ಬೆಂಗಳೂರು,ಡಿ.5- ಆದಾಯ ಸಂಗ್ರಹದಲ್ಲಿ ರಾಜ್ಯ ಉತ್ತಮ ಸಾಧನೆ ತೋರುತ್ತಿದೆ. ಕಳೆದ ಬಾರಿಗಿಂತ ಗಣನೀಯ ಏರಿಕೆ ಕಂಡಿದ್ದು, ಇದರಿಂದ 2022-23 ಬಜೆಟ್ ಅಂದಾಜು ಮೀರಿ ಆದಾಯ ಸಂಗ್ರಹದ ನಿರೀಕ್ಷೆ ಮೂಡಿದೆ.ಕಳೆದ ಮೂರು ವರ್ಷಗಳಿಂದ ಕೋವಿಡ್ ನಿರ್ಬಂಧಗಳಿಂದ ರಾಜ್ಯದ ಆದಾಯ ಸೊರಗಿ ಹೋಗಿದ್ದವು. ತೆರಿಗೆಮೂಲಗಳಿಂದ ನಿರೀಕ್ಷಿತ ಆದಾಯ ಸಂಗ್ರಹ ಸಾಧ್ಯವಾಗಿ ರಲಿಲ್ಲ. ಇದರಿಂದ ರಾಜ್ಯದ ಬೊಕ್ಕಸ ಆದಾಯ ಕೊರತೆ ಅನುಭವಿಸಿತ್ತು. ಆದರೆ ಇದೀಗ ಕೋವಿಡ್ ಆತಂಕ ಬಹುತೇಕ ದೂರವಾಗಿದ್ದು, ರಾಜ್ಯ ಸರ್ಕಾರದ ಆದಾಯ ಸಂಗ್ರಹ ಮತ್ತೆ ಸಂಪೂರ್ಣವಾಗಿ ಚೇತರಿಕೆ ಕಂಡಿದೆ. […]