ಹೋಳಿ ರಂಗಿನಿಂದ ಪಾರಾಗಲು ಮಸೀದಿಗೆ ಹೊದಿಕೆ

ಅಲಿಗಢ,ಮಾ.7- ಪ್ರಾರ್ಥನ ಮಂದಿರದ ಮೇಲೆ ಹೋಳಿ ರಂಗು ಎರಚುವುದನ್ನು ತಡೆಗಟ್ಟುವ ಉದ್ದೇಶದಿಂದ ಮಸೀದಿಯೊಂದರನ್ನು ಟಾರ್ಪಾಲಿನ್‍ನಿಂದ ಮುಚ್ಚಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಹೋಳಿ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ, ಅಲಿಘರ್‍ನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಕ್ರಾಸ್‍ರೋಡ್‍ನಲ್ಲಿರುವ ಅಬ್ದುಲ್ ಕರೀಂ ಮಸೀದಿ ಹಲ್ವಾಯಿಯನ್ ಅನ್ನು ಟಾರ್ಪಾಲಿನ್‍ನಿಂದ ಮುಚ್ಚಲಾಗಿದೆ. ವಿಶೇಷವೆಂದರೆ, ಕಳೆದ ಕೆಲವು ವರ್ಷಗಳ ಹೋಳಿಯಂತೆ, ಸೂಕ್ಷ್ಮ ಪ್ರದೇಶದ ಮಸೀದಿಯನ್ನು ರಾತ್ರಿಯಿಡೀ ಟಾರ್ಪಾಲಿನ್‍ನಿಂದ ಮುಚ್ಚಲಾಯಿತು, ಆದ್ದರಿಂದ ಹೋಳಿ ನಿಮಿತ್ತ ಯಾರೂ ಮಸೀದಿಯ […]