ಕೋರೆಗಾಂವ್-ಭೀಮಾ ಹಿಂಸಾಚಾರ ತನಿಖಾ ಆಯೋಗದ ಅಧಿಕಾರವಧಿ ವಿಸ್ತರಣೆ

ಪುಣೆ,ಜ.19- ಪುಣೆ ನಗರದ ಹೊರವಲಯದಲ್ಲಿ 2018ರ ಜನವರಿ 1ರಂದು ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸುತ್ತಿರುವ ಕೋರೆಗಾಂವ್-ಭೀಮಾ ತನಿಖಾ ಆಯೋಗದ ಅಧಿಕಾರವಯನ್ನು ಮಹಾರಾಷ್ಟ್ರ ಸರ್ಕಾರ ಮೂರು ತಿಂಗಳವರೆಗೂ ವಿಸ್ತರಣೆ ಮಾಡಿದೆ. ಮತ್ತಷ್ಟು ಸಾಕ್ಷಿಗಳನ್ನು ದಾಖಲಿಸಬೇಕಿರುವುದರಿಂದ ಮತ್ತಷ್ಟು ಕಾಲಾವಕಾಶ ಅಗತ್ಯವಿದೆ ಎಂದು ಸಮಿತಿ ಮನವಿ ಮಾಡಿತ್ತು. ಹಿಂಸಾಚಾರದ ವಿಚಾರಣೆಗಾಗಿ ರಚಿಸಲಾಗಿರುವ ಆಯೋಗದಲ್ಲಿ ಇಬ್ಬರು ಸದಸ್ಯರಿದ್ದಾರೆ. ಆಯೋಗಕ್ಕೆ 2022ರ ಡಿಸೆಂಬರ್ 31ರವರೆಗೆ ಕಾಲಾವಕಾಶವಿತ್ತು. ಅದನ್ನು ಈ ವರ್ಷದ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ. 1818 […]

ವೋಟರ್ ಡಾಟಾ ಹಗರಣದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ : ಸಿಎಂ

ಬೆಂಗಳೂರು,ನ.26- ಮತದಾರರಗುರುತಿನ ಚೀಟಿ ಪರಿಷ್ಕರಣೆ ಪ್ರಕರಣದಲ್ಲಿ ಯಾವುದೇ ಅಧಿಕಾರಿಗಳು ಭಾಗಿಯಾಗಿದ್ದರೆ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಐಎಎಸ್ ಇರಲಿ ಅಥವಾ ಇನ್ಯಾವುದೇ ಅಧಿಕಾರಿ ಇರಲಿ ಕಾನೂನು ಮುಂದೆ ಎಲ್ಲರೂ ಒಂದೇ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಕೆಲವು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳನ್ನು ಚುನಾವಣಾ […]

ವೋಟರ್ ಐಡಿ ಹಗರಣ : ಕೇಂದ್ರ ಚುನಾವಣಾ ಆಯೋಗದಿಂದ ಪರಿಶೀಲನೆ

ಬೆಂಗಳೂರು,ನ.24- ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿರುವ ಚಿಲುಮೆ ಸಂಸ್ಥೆ ಹಗರಣ ಕೇಂದ್ರ ಚುನಾವಣಾ ಆಯೋಗದ ನಿದ್ದೆಗೆಡಿಸಿದೆ. ಚಿಲುಮೆ ಸಂಸ್ಥೆ ವಿರುದ್ಧ ಕೇಳಿ ಬಂದಿರುವ ಆರೋಪದ ಹಿನ್ನಲೆಯಲ್ಲಿ ಪ್ರಕರಣದ ಜಾಡು ಪತ್ತೆ ಹಚ್ಚಲು ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತರು ನಗರಕ್ಕೆ ಆಗಮಿಸಿದ್ದಾರೆ. ನಗರದಲ್ಲಿ ಬೀಡುಬಿಟ್ಟಿರುವ ಉಪ ಆಯುಕ್ತರು ಇಂದು ನಗರದ 28 ಕ್ಷೇತ್ರಗಳ ಮತದಾರರನೋಂದಣಿ ಅಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಕಳೆದ ಜ.1ರಿಂದ ಇಲ್ಲಿಯವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವ ಮತ್ತು ತೆಗೆದು […]

ಶೇಷನ್ ಅವರಂತಹ ಚುನಾವಣಾ ಆಯುಕ್ತರ ಅವಶ್ಯಕತೆಯಿದೆ : ಸುಪ್ರೀಂ

ನವದೆಹಲಿ,ನ.23- ಟಿ.ಎನ್.ಶೇಷನ್ ಅವರಂತಹ ದಕ್ಷ ಅಧಿಕಾರಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಚುನಾವಣಾ ಆಯುಕ್ತರ ನೇಮಕ ವ್ಯವಸ್ಥೆಯಲ್ಲಿ ಸುಧಾರಣೆ ತರುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಸಂವಿಧಾನ ಪೀಠ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದೆ. ಅಗಾಧ ಅಧಿಕಾರ ಹೊಂದಿರುವ ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯನ್ನು ದುರ್ಬಲ ವ್ಯಕ್ತಿಗಳನ್ನು ನಿಯೋಜನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇಂತಹ ಧೋರಣೆ ಸರಿಯಲ್ಲ. ಸಿಇಸಿ ಸ್ಥಾನಕ್ಕೆ ಈ ಹಿಂದೆ 1990 […]

2023ರ ಚುನಾವಣೆಗೆ 5.09 ಕೋಟಿ ಮತದಾರರು: ಕರಡು ಪಟ್ಟಿ ಪ್ರಕಟ

ಬೆಂಗಳೂರು,ನ.22- ರಾಜ್ಯ ಇನ್ನೇನು ಚುನಾವಣೆ ಹೊಸ್ತಿಲಲ್ಲಿ ಇದೆ. ಇತ್ತ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿವೆ. ಚುನಾವಣಾ ಆಯೋಗವೂ ಭರದಿಂದ ಸಿದ್ಧತೆ ಕೈಗೆತ್ತಿಕೊಂಡಿದೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗಪ್ರಕಟಿಸುವ ಮೂಲಕ ಚುನಾವಣಾ ತಯಾರಿ ಆರಂಭಿಸಿದೆ. ಕರ್ನಾಟಕ ಇದೀಗ ಚುನಾವಣೆಯ ಹೊಸ್ತಲಲ್ಲಿ ಇದೆ. ಇನ್ನೇನು ಐದಾರು ತಿಂಗಳಲ್ಲಿ ರಾಜ್ಯ ಚುನಾವಣೆ ಎದುರಿಸಲಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯನ್ನು ಭರ್ಜರಿಯಾಗಿ ಆರಂಭಿಸಿವೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ […]

ಮತದಾರರ ಪಟ್ಟಿ ಅಕ್ರಮ : ನಾಳೆ ಕಾಂಗ್ರೆಸ್‍ನಿಂದ ಆಯೋಗಕ್ಕೆ ದೂರು

ಬೆಂಗಳೂರು, ನ.22- ಮತದಾರರ ಪಟ್ಟಿ ಅಕ್ರಮವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವ ಕಾಂಗ್ರೆಸ್, ನಾಳೆ ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಲಿಖಿತ ದೂರು ಸಲ್ಲಿಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದು ಅಲ್ಲಿ ಕಾನೂನು ತಜ್ಞರು ಹಾಗೂ ಎಐಸಿಸಿ ಪದಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಮೊದಲ ಹಂತದ ಚರ್ಚೆ ನಡೆಸಿದ ಬಳಿಕ ಕಾನೂನಾತ್ಮಕವಾದ ಲಿಖಿತ ದೂರನ್ನು ಸಿದ್ಧ ಪಡಿಸಿ ನಾಳೆ ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ನಿಯೋಗ ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ […]

ಮತದಾರರ ಮಾಹಿತಿ ಕಳುವು ಕುರಿತು ಚುನಾವಣಾ ಆಯೋಗದಿಂದ ತನಿಖೆ

ಬೆಂಗಳೂರು, ನ.18- ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಈ ಆರೋಪ ಕುರಿತಂತೆ ಸಮಗ್ರ ತನಿಖೆ ನಡೆಸಲು ತೀರ್ಮಾನಿಸಿದೆ. ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣದಲ್ಲಿ ಚಿಲುಮೆ ಸಂಸ್ಥೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಆಯೋಗ ಈ ತೀರ್ಮಾನ ಕೈಗೊಂಡಿದೆ. ಇಂತಹ ಆರೋಪಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ಅನುಮಾನ ಮೂಡುವುದರಿಂದ ಈ ಕುರಿತಂತೆ ಸಂಪೂರ್ಣ ತನಿಖೆ ನಡೆಸಲು ಪ್ರಾದೇಶಿಕ ಆಯುಕ್ತರನ್ನು ತನಿಖಾಕಾಧಿರಿಯನ್ನಾಗಿ ನೇಮಕ ಮಾಡಲಾಗಿದೆ. ನ.1ರಿಂದಲೇ ಪೂರ್ವಾನ್ವಯವಾಗುವಂತೆ […]

7ನೇ ವೇತನ ಆಯೋಗ ರಚನೆ, ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ

ಬೆಂಗಳೂರು,ನ.9- ವಿಧಾನಸಭೆ ಚುನಾವಣೆ ಸಮೀಪ ಇರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡುವ ಮೂಲಕ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ. ಬಹುದಿನಗಳ ಬೇಡಿಕೆಯಂತೆ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಣೆ ಮಾಡುವ ಕುರಿತು 7ನೇ ವೇತನ ಆಯೋಗ ರಚನೆ ಮಾಡಲಾಗಿದೆ. ದಾವಣಗೆರೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು […]

ರಾಜ್ಯದಲ್ಲಿ ಉಪಚುನಾವಣೆ ನಡೆಸದಿರಲು ಆಯೋಗ ನಿರ್ಧಾರ ..?

ಬೆಂಗಳೂರು,ನ.7- ಮಾಜಿ ಸಚಿವ ಉಮೇಶ್ ಕತ್ತಿ ಹಾಗೂ ವಿಧಾನಸಭೆಯ ಉಪಾಧ್ಯಕ್ಷ ಆನಂದ್ ಮಾಮನಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸದಿರಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದಂತಿದೆ. ಬರುವ ವರ್ಷದ ಮೇ ತಿಂಗಳಲ್ಲಿ ರಾಜ್ಯವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಚುನಾವಣೆ ಆಯೋಗ ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ. ಸಚಿವರಾಗಿದ್ದ ಉಮೇಶ ಕತ್ತಿ ಮತ್ತು ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಆನಂದ ಚಂದ್ರಶೇಖರ ಮಾಮನಿ ಅವರ ಅಗಲಿಕೆಯಿಂದ ತೆರವಾಗಿರುವ ಹುಕ್ಕೇರಿ […]

ಚುನಾವಣೆ ಆಯೋಗದ ಸೂಚನೆ ಪಾಲಿಸದ ಗುಜರಾತ್ ಅಧಿಕಾರಿಗಳು

ನವದೆಹಲಿ, ಅ.22- ವಿಧಾನಸಭೆ ಚುನಾವಣೆಗೂ ಮುನ್ನವೇ ಧಿಅಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತ ಅನುಪಾಲನಾ ವರದಿಯನ್ನು ಕಳುಹಿಸಲು ಗುಜರಾತ್ ಸರಕಾರದ ಅಧಿಕಾರಿಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಗುಜರಾತ್ ಸರ್ಕಾರದ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯಿಂದ ವಿವರಣೆ ಕೇಳಿದೆ. ಗುಜರಾತ್ ಮುಖ್ಯ ಕಾರ್ಯದರ್ಶಿಗೆ ಶುಕ್ರವಾರ ಪತ್ರ ಬರೆದಿರುವ ಚುನಾವಣಾ ಆಯೋಗ ಕೆಲವು ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಬಗ್ಗೆ ಅನುಸರಣೆ ವರದಿಗಳನ್ನು ಕಳುಹಿಸಲು ವಿಫಲರಾಗಿರುವ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದೆ. ನಿಗದಿತ ಅವಧಿ […]