2023ರ ಅಂತ್ಯಕ್ಕೆ ನೀರೊಳಗಿನ ಮೆಟ್ರೋ ರೈಲು ಸಂಚಾರ

ಕೋಲ್ಕತ್ತಾ,ಡಿ.30- ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಲಾಗುತ್ತಿರುವ ದೇಶದ ಪ್ರಪ್ರಥಮ ಅಂಡರ್ ವಾಟರ್ ಮೆಟ್ರೋ ರೈಲು ಸಂಚಾರ ಡಿಸಂಬರ್ 2023ರೊಳಗೆ ಪೂರ್ಣಗೊಳ್ಳಲಿದೆ ಎಂದು ಕೋಲ್ಕತ್ತಾ ಮೆಟ್ರೋ ರೈಲು ನಿಗಮ ತಿಳಿಸಿದೆ. ದೇಶದ ಮೊದಲ ನೀರೊಳಗಿನ ಮೆಟ್ರೋ ರೈಲು ಸಂಚಾರದ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಯೋಜನೆ 2023ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೆಎಂಆರ್ಸಿ ಎಂಡಿ ಶೈಲೇಶ್ ಕುಮಾರ್ ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ 1984ರಲ್ಲೇ ಮೆಟ್ರೋ ರೈಲು ಸಂಚಾರ ಆರಂಭಿಸಲಾಗಿದ್ದು, ಇಡಿ ನಗರವನ್ನು ಮೆಟ್ರೋ ರೈಲು ಸುತ್ತುವರೆದಿದೆ. ಇದೀಗ ಹೂಗ್ಲಿ ನದಿ ಮೂಲಕ […]