ತಿಂಗಳಾದರೂ ಶಿಂಧೆ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯ ಸುಳಿವಿಲ್ಲ

ಮುಂಬೈ, ಜು.30- ಶಿವಸೇನೆ ವಿರುದ್ಧ ಬಂಡಾಯ ಸಾರಿ, ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಿ, ಬಿಜೆಪಿ ಜೊತೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದ ಏಕನಾಥ್ ಶಿಂಧೆ ಒಂದು ತಿಂಗಳಾದರು ಸಂಪುಟ ವಿಸ್ತರಣೆ ಮಾಡಲಾಗದೆ ಪರದಾಡುತ್ತಿದ್ದಾರೆ. ಹೈವೋಲ್ಟೇಜ್ ರಾಜಕೀಯ ಡಾಮ್ರಾದಲ್ಲಿ ಯಶಸ್ಸು ಪಡೆದ ಏಕನಾಥ್ ಶಿಂಧೆ ಜು.30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಉಪಮುಖ್ಯಮಂತ್ರಿಯಾಗಿ ಬಿಜೆಪಿ ದೇವೇಂದ್ರ ಪಡ್ನಾವೀಸ್ ಕೆಲಸ ಮಾಡುತ್ತಿದ್ದಾರೆ. ಇಬ್ಬರನ್ನೊಳಗೊಂಡ ಸಂಪುಟ ಒಂದು ತಿಂಗಳಿನಿಂದಲೂ ಆಡಳಿತ ನಡೆಸುತ್ತಿದೆ. ರಾಜ್ಯಸಭೆ ಮತ್ತು ವಿಧಾನಪರಿಷತ್‍ಗೆ ನಡೆದ ಚುನಾವಣೆಗಳಿಂದ ಚಾಲನೆಗೊಂಡ ರಾಜಕೀಯ […]