ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಅವಘಡ

ಪುರಿ,(ಒಡಿಶಾ), ಮಾ.9 – ನಗರದ ಪ್ರಮುಖ ವ್ಯಾಪಾರ ಕಾಂಪ್ಲೆಕ್ಸ್‍ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಅಲ್ಲಿದ್ದ ಎಲ್ಲಾ 40 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಕಳೆದ ರಾತ್ರಿ ಲಕ್ಷೀ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅದು ಕಟ್ಟಡ ಪೂರ್ತಿ ವ್ಯಾಪಿಸಿ ಎಲ್ಲವನ್ನು ನಾಶಪಡಿಸಿದೆ. ಬೆಂಕಿ ನಂದಿಸಲು ಹನ್ನೆರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಕಾಂಪ್ಲೆಕ್ಸ್ ನಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಕಟ್ಟಡದಿಂದ ಹೊರಬರಲಾಗದೆ ಮೇಲ್ಛಾವಣಿಯ ಮೇಲೆ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲಿದ್ದ […]

ಕಾರ್ಮಿಕರಿಗೆ ‘ಶ್ರಮಿಕ್ ನಿವಾಸ್’ ಬೃಹತ್ ವಸತಿ ಸಮುಚ್ಚಯ

ಬೆಂಗಳೂರು,ಮಾ.6- ಕಾರ್ಮಿಕ ಇಲಾಖೆಯ ಶ್ರಮಿಕ್ ನಿವಾಸ್ ಎಂಬ ಮಹತ್ವಾಕಾಂಕ್ಷಿ ಯೋಜನೆ ಶೀಘ್ರವೇ ಜಾರಿಯಾಗಲಿದೆ. ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ಶ್ರಮಿಕ್ ನಿವಾಸ್ ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡಲು ವಸತಿ ಸಮುಚ್ಚಯ ಮತ್ತು ಬಿಡಿ ಮನೆಗಳ ನಿರ್ಮಾಣಕ್ಕೆ ಕಾರ್ಮಿಕ ಇಲಾಖೆ ಮುಂದಾಗಿದೆ. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ದೂರದೃಷ್ಟಿಯಿಂದಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕೈಗಾರಿಕಾ ವಲಯದ ಬದನಹಳ್ಳಿಯಲ್ಲಿ ಬೃಹತ್ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯ ನಿರ್ಮಾಣವಾಗಿದೆ. ಸುಮಾರು 19 ಕೋಟಿ […]

ಬೆಂಗಳೂರಿಗರಿಗೆ ಚಿರತೆ ಭಯ

ಬೆಂಗಳೂರು,ಡಿ.2- ಸಿಲಿಕಾನ್ ಸಿಟಿ ಜನರಿಗೆ ಚಿರತೆ ಕಾಟ ಶುರುವಾಗಿದೆ ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದ್ದು ಭಯ ಹುಟ್ಟಿಸಿದೆ. ಬಿಡಿಎ ಕೆಂಗೇರಿ ಸುತ್ತಮುತ ಬಿಡಿಎ ಕಾಂಪ್ಲೆಕ್ಸ್ ಕಡೆ ಚಿರತೆ ಬಂದಿದೆ ಎಂದು ಹೇಳಲಾಗುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಕನಕಪುರ ರಸ್ತೆ ಕೋಡಿಪಾಳದಲ್ಲಿ ಚಿರತೆ ಒಡಾಟ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಸುಮಾರು 4 ಚಿರತೆಗಳುನಗರ ಪ್ರದೇಶಕ್ಕೆ ಬಂದಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಕೆಂಗೇರಿ ಹೊರವಲಯದಲ್ಲಿ ಹಲವಾರು ಶಾಲೆಗಳಿದ್ದು, ಪೊಷಕರು ಮಕ್ಕಳನ್ನು ಹೊರಗೆ ಕಳುಹಿಸಲು ಭಯಪಡಿತ್ತಿದ್ದಾರೆ.ತುರಹಳ್ಳಿಯಲ್ಲಿ ಕಳೆದ ರಾತ್ರಿ […]