ಉಚಿತ ಕಂಪ್ಯೂಟರ್ ತರಬೇತಿ ಪಡೆದ ಸ್ಲಂ ಮಕ್ಕಳಿಗೆ ಸರ್ಟಿಫಿಕೇಟ್ ವಿತರಣೆ

ಬೆಂಗಳೂರು,ಜ.20-ವಿದ್ಯೆ ಇದ್ದರೆ ಸಮಾಜದಲ್ಲಿ ಗೌರವ. ಹೀಗಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶದ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದು ಶಾಸಕ ಉದಯ ಗರುಡಚಾರ್ ಕರೆ ನೀಡಿದರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದದ ಹೊಂಬೇಗೌಡನಗರ ವಾರ್ಡ್‍ನಲ್ಲಿ ಸ್ಲಂ ಸಂಸ್ಥೆ ಮತ್ತು ಗರುಡ ಫೌಂಡೇಷನ್ ಹಾಗೂ ಮಣಿಪಾಲ್ ಇಂಗ್ಲೀಷ್ ಆಕಾಡಮಿಯಿಂದ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್ ತರಬೇತಿ ಪಡೆದ ಕೊಳಚೆ ಪ್ರದೇಶದ ನೂರಾರು ಮಕ್ಕಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಿ ಅವರು ಮಾತನಾಡಿದರು. 21ನೇ ಶತಮಾನ ಕಂಪ್ಯೂಟರ್ ಯುಗವಾಗಿದೆ. ತಂತ್ರಜ್ಞಾನ ಮುಂದುವರೆದರೆ ದೇಶ ಮುನ್ನಡೆ […]