ಗ್ರಾಪಂ ಕಚೇರಿಯ ಬೀಗ ಒಡೆದು ಕಂಪ್ಯೂಟರ್, ದಾಖಲೆಗಳನ್ನು ಕದ್ದ ಕಳ್ಳರು

ಕನಕಪುರ, ಜು.14- ತಾಲ್ಲೂಕಿನ ಅಚ್ಚಲು ಗ್ರಾಮ ಪಂಚಾಯಿತಿ ಕಚೇರಿಯ ಬೀಗ ಒಡೆದು ಕಳ್ಳರು ಕಂಪ್ಯೂಟರ್ ಹಾಗೂ ಕೆಲ ದಾಖಲೆಗಳನ್ನು ಕದ್ದೊಯ್ದಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಇಂದು ಬೆಳಗ್ಗೆ ಗ್ರಾಪಂಗೆ ಬಂದ ಕೆಲ ಅಧಿಕಾರಿಗಳು ಬಾಗಿಲು ತೆರೆದಿರುವುದನ್ನು ನೋಡಿ ಗಾಬರಿಗೊಂಡು ಒಳನೋಡಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಗೊತ್ತಾಗಿದೆ. ಕಂಪ್ಯೂಟರ್‍ಗಳು ಮತ್ತು ಬೀರುವಿನಲ್ಲಿಟ್ಟಿದ್ದ ಕೆಲ ದಾಖಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿರುವ ಸಾತನೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳ ಪ್ರಕಾರ, ಕೆಲವು […]