ಕಲಾತಪಸ್ವಿ ರಾಜೇಶ್ ನಿಧಾನಕ್ಕೆ ವಿಧಾನಪರಿಷತ್‍ನಲ್ಲಿ ಶ್ರದ್ಧಾಂಜಲಿ

ಬೆಂಗಳೂರು,ಫೆ.21- ಹಿರಿಯ ಕಲಾವಿದ, ಕಲಾತಪಸ್ವಿ ಡಾ.ರಾಜೇಶ್ ಅವರ ನಿಧನಕ್ಕೆ ವಿಧಾನಪರಿಷತ್‍ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೇಶ್ ಅವರ ನಿಧನವನ್ನು ಸದನದ ಗಮನಕ್ಕೆ ತಂದು ಸಂತಾಪ ಸೂಚನೆಯನ್ನು ಮಂಡಿಸಿದರು. 1935 ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಜನಿಸಿದ ರಾಜೇಶ್ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರ ಲಿಪಿಗಾರರಾಗಿ ಕೆಲಸ ನಿರ್ವಹಿಸಿದ್ದರು. ಇವರ ಮೂಲ ಹೆಸರು ಮುನಿಚೌಡಪ್ಪ. ಪ್ರೌಢಶಾಲಾ ದಿನಗಳಲ್ಲೇ ರಂಗಭೂಮಿಯ ಸೆಳೆತ ಅಪಾರವಾಗಿದ್ದು, ಸುದರ್ಶನ್ ನಾಟಕ ಮಂಡಳಿ ಸ್ಥಾಪಿಸಿ ನಿರುದ್ಯೋಗಿ ಬಾಳು, ಬಡವ ಬಾಳು, […]