ಫೆ.2 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ..?

ಬಾಗಲಕೋಟೆ,ಜ.18- ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಟ್ಟಂತೆ ಫೆಬ್ರವರಿ ಎರಡರಂದು ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬಾಲಗಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಚುನಾವಣಾ ಸಮಿತಿಗೂ ಮೊದಲೇ ಪ್ರತಿ ಜಿಲ್ಲೆಗೆ ನಿಯೋಗ ಕಳುಹಿಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಪಡೆಯಲಾಗಿದೆ. ಹುರಿಯಾಳುಗಳ ಆಯ್ಕೆ ಕಾಂಗ್ರೆಸ್ ನಮ್ಮದೇ ಆದ ಮಾದರಿ ಅನುಸರಿಸುತ್ತೇವೆ. ಗುಜರಾತ್ ಮಾದರಿಯನ್ನು ಬೇಕಿದ್ದರೆ ಬಿಜೆಪಿಯವರು ಅನುಸರಿಸಲಿ, ನಾವು ಕರ್ನಾಟಕ ಮಾದರಿಯನ್ನೇ ಪಾಲನೆ ಮಾಡುತ್ತೇವೆ ಎಂದರು. […]