ಕಾಂಗ್ರೆಸ್ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ : ಜಿ-23 ನಾಯಕರು

ನವದೆಹಲಿ, ಫೆ.16- ಹಿರಿಯ ನಾಯಕ ಅಶ್ವನಿ ಕುಮಾರ್ ಅವರು ಕಾಂಗ್ರೆಸ್‍ನಿಂದ ನಿರ್ಗಮಿಸಿರುವುದು ಪಕ್ಷದಲ್ಲಿ ಮತ್ತೊಮ್ಮೆ ತೀವ್ರ ಉದ್ವಿಗ್ನತೆಯನ್ನುಂಟುಮಾಡಿದೆ. ಈ ಬಗ್ಗೆ ಪಕ್ಷವು ಮೌನ ವಹಿಸಿದ್ದರೂ ಪಕ್ಷದೊಳಗಿನ ಜಿ-23 ಗುಂಪಿನ ನಾಯಕರು ಇದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಪಕ್ಷದ ಹಿರಿಯ ಧುರೀಣ ಗುಲಾಂ ನಬಿ ಆಜಾದ ಅವರು ಪಕ್ಷದಿಂದ ನಾಯಕರು ಒಬ್ಬರ ನಂತರ ಒಬ್ಬರಂತೆ ಹೊರನಡೆಯುತ್ತಿರುವುದು ಗಂಬೀರ-ಆತಂಕದ ವಿಷಯವಾಗಿದೆ ಎಂದು ನುಡಿದಿದ್ದಾರೆ. ಆಜಾದ್, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮಾ ಮತ್ತು ಲೋಕಸಭಾ […]