ಕಾಂಗ್ರೆಸ್‍ನ ನಾಯಕ ಸುರ್ಜೆವಾಲರಿಗೆ ಕೊರೊನಾ

ಬೆಂಗಳೂರು, ಜ.5- ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಅವರಿಗೆ ಕೊರೊನಾ ಸೋಂಕು ತಗುಲಿದೆ. ಸೋಮವಾರ ರಾತ್ರಿ ಸಣ್ಣ ಪ್ರಮಾಣದ ಜ್ವರ, ಶೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾವು ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್ ಪಾಸಿಟಿವ್ ವರದಿ ಬಂದಿದೆ. ನನ್ನೊಂದಿಗೆ 24 ಗಂಟೆಯೊಳಗೆ ಸಂಪರ್ಕಕ್ಕೆ ಬಂದ ಎಲ್ಲರೂ ಮುಂಜಾಗೃತಾ ಕ್ರಮವಾಗಿ ಪರೀಕ್ಷೆಗೆ ಒಳಪಡುವಂತೆ ರಣದೀಪ್ ಸಿಂಗ್ ಟ್ವಿಟ್‍ನಲ್ಲಿ ಮನವಿ ಮಾಡಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ಸುರ್ಜೆವಾಲರೊಂದಿಗೆ ಮಾತನಾಡಿದ್ದು, ಶೀಘ್ರವೇ ಗುಣಮುಖರಾಗುವಂತೆ […]