ಪ್ರತಿಭಟನೆಗೆ ಸಜ್ಜಾಗಲು ವರ್ಚುವಲ್ ಸಭೆ ; ವಿಧಾನಸೌಧದ ಆವರಣದಿಂದಲೇ ನಾಯಕರ ಸಂವಾದ

ಬೆಂಗಳೂರು, ಫೆ.20- ಸಚಿವ ಈಶ್ವರಪ್ಪ ಅವರ ವಿವಾದಿತ ಹೇಳಿಕೆ ವಿರುದ್ಧ ನಾಳೆ ಕಾಂಗ್ರೆಸ್ ರಾಜ್ಯಾದ್ಯಂತ ನಡೆಸಲಿರುವ ಪ್ರತಿಭಟನೆ ಹಾಗೂ ಫೆ.27ರಿಂದ ಮರು ಚಾಲನೆಯಾಗುವ ಪಾದಯಾತ್ರೆ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ವಿಧಾನಸೌಧದಿಂದಲೇ ತಮ್ಮ ಪಕ್ಷದ ನಾಯಕರ ಜೊತೆ ವರ್ಚುವಲ್ ಸಭೆ ನಡೆಸಿದರು. ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಅವರು ನೀಡಿರುವ ಹೇಳಿಕೆಯನ್ನು ವಿರೋಸಿ ಕಾಂಗ್ರೆಸ್ ನಾಲ್ಕು ದಿನಗಳಿಂದ ವಿಧಾನಮಂಡಲದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಇಂದು ಧರಣಿಯ ಸ್ಥಳದಿಂದಲೇ ಕೆಪಿಸಿಸಿ […]