ಅಯೋಧ್ಯೆಯ ಧನ್ನಿಪುರದಲ್ಲಿ ಶೀಘ್ರವೇ ಮಸೀದಿ ನಿರ್ಮಾಣ ಆರಂಭ

ಲಕ್ನೋ,ಫೆ.26- ಹಲವು ಅಡೆತಡೆಗಳ ಬಳಿಕ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಅಯೋಧ್ಯೆ ಜಿಲ್ಲೆ ಧನ್ನಿಪುರದಲ್ಲಿ ಶೀಘ್ರವೇ ಮಸೀದಿ ನಿರ್ಮಾಣ ಆರಂಭಗೊಳ್ಳುವ ನಿರೀಕ್ಷೆಗಳಿವೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ತಿಳಿಸಿದೆ. ಆರಂಭದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‍ಒಸಿ) ಪಡೆಯುವಲ್ಲಿ ವಿಳಂಬವಾಗಿತ್ತು. ನಂತರ ಭೂ ಬಳಕೆ ಬದಲಾವಣೆಯಲ್ಲಿ ವಿಳಂಬವಾಯಿತು. ಈಗ ಎಲ್ಲಾ ಅನುಮತಿಗಳು ದೊರೆಯುವ ಕಾಲ ಸನ್ನಿತವಾಗಿದೆ. ರಾಜ್ಯ ಸರ್ಕಾರ ನೀಡಿರುವ ಐದು ಎಕರೆ ಜಾಗದಲ್ಲಿ ಮಸೀದಿ, ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆ ಕೋಣೆ ಮತ್ತು ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದು ಇಂಡೋ-ಇಸ್ಲಾಮಿಕ್ […]