ರಸ್ತೆಗೆ ಅಡ್ಡಬಿದ್ದ ಕಂಟೈನರ್ ಲಾರಿಗಳು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್

ಬೆಂಗಳೂರು/ನೆಲಮಂಗಲ, ಫೆ.27- ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಬಿದ್ದ ಕಂಟೈನರ್ ಲಾರಿಗಳನ್ನು ಮೇಲೆತ್ತಿ ತೆರವುಗೊಳಿಸಲು ಗಂಟೆಗಟ್ಟಲೆ ಹಿಡಿದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ನಿಂತಲ್ಲೇ ನಿಂತು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಷ್ಟ್ರೀಯ ಹೆದ್ದಾರಿ-4ರ ಅಡಕಮಾರನಹಳ್ಳಿ ಬಳಿ ಮೇಲ್ಸೇತುವೆ ಮೇಲೆ ದೊಡ್ಡ ಕಂಟೈನರ್ ಲಾರಿಗಳು ಪರಸ್ಪರ ಡಿಕ್ಕಿ ಹೊಡೆದು ರಸ್ತೆಯ ಎರಡೂ ಬದಿಗೂ ಅಡ್ಡಲಾಗಿ ಬಿದ್ದಿದ್ದರಿಂದ ಆ ಭಾಗದಲ್ಲಿ ಸಂಚರಿಸುವ ವಾಹನಗಳು ಸಂಪೂರ್ಣವಾಗಿ ಸುಮಾರು ಐದಾರು ಗಂಟೆಗಳ ಕಾಲ ಸ್ತಬ್ಧಗೊಂಡು ಪೊಲೀಸರು ಹಾಗೂ ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿಗೆ […]