ಕೊರೊನಾ ಬ್ಲಾಸ್ಟ್ : ಬೆಂಗಳೂರಿನಲ್ಲಿ ಯಾವ ಏರಿಯಾ ತುಂಬಾ ಡೇಂಜರ್..?

ಬೆಂಗಳೂರು, ಜ.12- ರಾಜ್ಯ ರಾಜಧಾನಿಯಿಂದ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬೆರಳೆಣಿಕೆಯಷ್ಟಿದ್ದ ಕಂಟೈನ್ಮೆಂಟ್ ಜೋನ್ ಸಂಖ್ಯೆ ಇದೀಗ 476ಕ್ಕೆ ತಲುಪಿದೆ. ಕಳೆದ ಒಂದು ವಾರದಿಂದ ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ನಿರೀಕ್ಷೆಗೂ ಮೀರಿ ನಗರದಲ್ಲಿ ಸೋಂಕು ಹರಡುತ್ತಿದೆ. ಈ ಪೈಕಿ ಪ್ರಮುಖವಾಗಿ ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಅತೀ ಹೆಚ್ಚಿನ ಕಂಟೈನ್ಮೆಂಟ್ ಜೋನ್‍ಗಳು ಇವೆ. ನಗರದ ಪೂರ್ವ, ಪಶ್ಚಿಮ ವಲಯ ಸೇರಿದಂತೆ ಒಟ್ಟು ಎಂಟು ವಲಯಗಳಲ್ಲಿ 2140 ಕಂಟೈನ್ಮೆಂಟ್ ಜೋನ್ ಗುರುತಿಸಲಾಗಿದೆ. […]