ರಾಮನಗರದಿಂದ ಡಿ.ಕೆ.ಸುರೇಶ್ ಸ್ಪರ್ಧೆಗೆ ಪ್ರಸ್ತಾವನೆ : ಡಿಕೆಶಿ

ಬೆಂಗಳೂರು,ಮಾ.14- ಬಿಜೆಪಿ ಸರ್ಕಾರದಲ್ಲಿ ವಸತಿ ಸಚಿವರಾಗಿರುವ ವಿ.ಸೋಮಣ್ಣ ಕಾಂಗ್ರೆಸ್ ಸೇರುವ ಬಗ್ಗೆ ಎಲ್ಲಿಯೂ ಹೇಳಿಲ್ಲ, ನಮ್ಮನ್ನು ಕೇಳಿಲ್ಲ. ನಾವು ಕೂಡ ಅವರನ್ನು ಪಕ್ಷಕ್ಕೆ ಬರುವಂತೆ ಕರೆದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸೋಮಣ್ಣ ನಮ್ಮ ತಾಲ್ಲೂಕಿನವರು, ನಾನು ಸ್ರ್ಪಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಕಾಡಿನ ನಡುವೆ ಅವರ ಸ್ವಂತ ಮನೆಯಿದೆ. ಮೊನ್ನೆ ಕೂಡ ಅವರು ಊರಿಗೆ ಹೋಗಿದ್ದರು. ನಾವು ಅವರು ರಾಜಕಾರಣ ಹೊರತಾಗಿ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಧರ್ಮ, ಮಠ […]
ನಾಗಾಲ್ಯಾಂಡ್‍ನಲ್ಲಿ ಎಎಪಿ ಏಕಾಂಗಿ ಸ್ಪರ್ಧೆ

ಕೋಹಿಮಾ,ಜ.26-ಮುಂಬರುವ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸಾಧ್ಯವಾದಷ್ಟು ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ರ್ಪಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ರಾಜೇಶ್ ಶರ್ಮ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮಾಜಿ ಶಾಸಕ ಆಶು ಕೇಹೋ ಅವರನ್ನು ನಾಗಾಲ್ಯಾಂಡ್‍ನ ಎಎಪಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಘೋಷಿಸಿದರು. 60 ಕ್ಷೇತ್ರಗಳನ್ನೊಳಗೊಂಡಿರುವ ನಾಗಾಲ್ಯಾಂಡ್ ವಿಧಾನಸಭಾ ಕ್ಷೇತ್ರಗಳಿಗೆ ಬರುವ ಫೆ.27ರಂದು ಚುನಾವಣೆ ನಡೆಯಲಿದೆ. ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಾಡಿದ ತಿರಂಗಾ […]
ರಾಹುಲ್ ಗಾಂಧಿ ಸ್ಪರ್ಧಿಸುವ ಕ್ಷೇತ್ರದ ಚರ್ಚೆ ಹುಟ್ಟು ಹಾಕಿದ ಭಾರತ್ ಜೋಡೋ ಯಾತ್ರೆ

ಬಘ್‍ಪತ್,ಜ.4- ಹೊಸ ವರ್ಷ ರಜಾದಿನಗಳ ಬಿಡುವಿನ ಬಳಿಕ ಪುನರ್ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಅಮೇಥಿ ಕ್ಷೇತ್ರದ ಒಂದುವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಿಳಿ ಟಿ-ಶರ್ಟ್ ಧರಿಸಿ ಪಾಲ್ಗೋಳ್ಳುವ ಮೂಲಕ ಗಮನ ಸೆಳೆದರು. ಇಂದು ಬೆಳಗ್ಗೆ ಬಘಪತ್‍ನ ಮವಿಕಲನ್ ಗ್ರಾಮದಿಂದ ಯಾತ್ರೆ ಪುನರ್ ಆರಂಭವಾಯಿತು. ಉತ್ತರ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸಂಚರಿಸಿ ನಂತರ ಹರ್ಯಾಣದ ಪಾಣಿಪತ್ ಅನ್ನು ಗುರುವಾರ ಸಂಜೆ ಪ್ರವೇಶಿಸಲಿದೆ.ರಾಹುಲ್‍ಗಾಂಧಿ ಮುರು ಬಾರಿ ಸಂಸದರಾಗಿದ್ದ ಅಮೇಥಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಇಂದು ಯಾತ್ರೆಯಲ್ಲಿ ಭಾಗವಹಿಸಿದ್ದರು. […]
ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ : ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕೆ
ನವದೆಹಲಿ,ಸೆ.30-ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಖಾಡಕ್ಕೆ ಇಳಿಸುವ ಮೂಲಕ ಪಕ್ಷದಲ್ಲಿ ಬಂಡಾಯಗಾರರಿಗೆ ಸೋನಿಯಾ ಗಾಂಧಿ ಬಿಸಿ ಮುಟ್ಟಿಸಿದ್ದಾರೆ. ಸಂಕಷ್ಟ ಸಮಯದಲ್ಲಿ ಪಕ್ಷದ ಜೊತೆ ನಿಲ್ಲದೆ ಅಧಿಕಾರಕ್ಕಾಗಿ ಒಳಗೊಳಗೆ ಬಂಡಾಯ ಚಟುವಟಿಕೆಗಳಿಗೆ ಕುಮ್ಮಕು ನೀಡುತ್ತಿದ್ದ ಘಟಾನುಘಟಿ ನಾಯಕರನ್ನು ಮೂಲೆಗೆ ಸರಿಸುವ ಮೂಲಕ ಮತ್ತೊಂದು ಸಂಘರ್ಷಕ್ಕೆ ಹೈಕಮಾಂಡ್ ಮುಂದಾಗಿದೆಯೇ ಎಂಬ ಚರ್ಚೆಗಳು ನಡೆಯಲಾರಂಭಿಸಿವೆ. ಸೋನಿಯಾ ಗಾಂಧಿಯವರು ಪಕ್ಷದ ನಾಯಕತ್ವ ವಹಿಸಿಕೊಂಡಾಗಿನಿಂದಲೂ ಅಧ್ಯಕ್ಷರ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಾ ಬಂದಿದೆ. ನಾಯಕತ್ವ ಮತ್ತು ಹೈಕಮಾಂಡ್ ವಿರುದ್ಧ ಅಪಸ್ವರ ಇಲ್ಲದಂತೆ ಸಂಭಾಳಿಸಿಕೊಂಡು […]