ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ,ಜ.30-ತೀವ್ರ ಕುತೂಹಲ ಕೆರಳಿಸಿರುವ 2023-24 ಸಾಲಿನ ಬಜೆಟ್ ಕುರಿತಂತೆ ಇಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಬಜೆಟ್ ಅಧಿವೇಶನ ಸರಾಗವಾಗಿ ಸಾಗಲು ಎಲ್ಲಾ ಪಕ್ಷಗಳೂ ಸಹಕಾರ ಕೊಡಬೇಕೆಂದು ಸರ್ಕಾರ ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಸಭೆಯಲ್ಲಿ ವಿಪಕ್ಷಗಳು ತಮ್ಮ ಅನಿಸಿಕೆ ತೋರ್ಪಡಿಸಲಿದ್ದು, ಅಧಿವೇಶನದಲ್ಲಿ ತಾವು ಪ್ರಸ್ತಾಪಿಸುವ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ. ಸರ್ವಪಕ್ಷ ಸಭೆಯ ಬಳಿಕ ಆಡಳಿತಾರೂಢ ಎನ ಡಿಎ ಮೈತ್ರಿಕೂಟದ ನಾಯಕರು ಕೂಡ ಸಭೆ ಸೇರಿ ಬಜೆಟ್ […]
ಜಿ-20 ರಾಷ್ಟ್ರಗಳ ಶೃಂಗಕ್ಕೆ ಪೂರ್ವಭಾವಿ ಸರ್ವ ಪಕ್ಷ ಸಭೆ

ನವದೆಹಲಿ, ಡಿ.5- ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಭಾರತ ವಿವಿಧ ಪಕ್ಷಗಳ ಸಲಹೆ ಕೇಳಲು ಕರೆದಿರುವ ವಿಶೇಷ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಭಾಗವಹಿಸುವ ನಿರೀಕ್ಷೆಗಳಿವೆ. ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ವಿದೇಶಾಂಗ ಸಚಿವಾಲಯ ಮುಂದಿನ ದಿನಗಳಲ್ಲಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶನ ಮಾಡಲಿದೆ. ಮುಂದಿನ ವರ್ಷ ಸೆಪ್ಟಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ಜಿ-20 ರಾಷ್ಟ್ರಗಳ ಶೃಂಗಸಭೆ ನಡೆಯಲಿದೆ. ಅದಕ್ಕೆ […]