ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕುಕ್ಕರ್ ಭಾಗ್ಯ

ಬೆಂಗಳೂರು,ಜ.31- ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕಾರಣಿಗಳು ಮತದಾರರ ಓಲೈಕೆಗೆ ನಡೆಸುತ್ತಿರುವ ಕಸರತ್ತುಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಹೆಬ್ಬಾಳ ಶಾಸಕ ಭೈರತಿ ಸುರೇಶ್ ಮತದಾರರಿಗೆ ಟಿವಿ ಭಾಗ್ಯ ನೀಡಿರುವ ಬೆನ್ನಲ್ಲೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಹಿರಂಗವಾಗಿಯೇ ಮತದಾರರಿಗೆ ಕುಕ್ಕರ್ ಭಾಗ್ಯ ಕರುಣಿಸಿ ಮತ ಸೆಳೆಯಲು ಮುಂದಾಗಿದ್ದಾರೆ. ಬಿಜೆಪಿ ಶಾಸಕರಾಗಿದ್ದರೂ ಪಕ್ಷದಿಂದ ಸ್ವಲ್ಪ ಅಂತರ ಕಾಯ್ದುಕೊಂಡೆ ಬಂದಿರುವ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರು ಮುಂಬರುವ ಚುನಾವಣೆಯಲ್ಲಿ ಮತ್ತೆ ಗೆದ್ದುಬಂದು ಶಾಸಕರಾಗುವ ಹೆಬ್ಬಯಕೆಯಿಂದ ಕ್ಷೇತ್ರದ ಮತದಾರರಿಗೆ ಕುಕ್ಕರ್ […]

ಕುಕ್ಕರ್ ಕಿರಾತಕ ಶಾರಿಕ್ ಎನ್‍ಐಎ ವಶಕ್ಕೆ!

ಬೆಂಗಳೂರು,ಜ.28- ಕಳೆದ ನವೆಂಬರ್ ತಿಂಗಳಿನಲ್ಲಿ ಮಂಗಳೂರಿನ ಕಂಕನಾಡಿ ಬಳಿ ಕುಕ್ಕರ್ ಬಾಂಬ್ ಸ್ಪೋಟಗೊಂದು ಗಂಭೀರವಾಗಿ ಗಾಯಗೊಂಡಿದ್ದ ಶಂಕಿತ ಉಗ್ರ ಶಾರೀಕ್ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆಯಲು ಮುಂದಾಗಿದೆ. ಕುಕ್ಕರ್ ಸ್ಪೋಟಗೊಂಡ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶಂಕಿತ ಉಗ್ರ ಶಾರೀಕ್‍ಗೆ ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೇ.25ರಷ್ಟು ಈತನ ದೇಹದ ಅಂಗಾಂಗಗಳು ಸುಟ್ಟು ಹೋಗಿದ್ದವು. ಇದೀಗ ದಿನ ಕಳೆದಂತೆ ಆತನ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿದ್ದು, […]

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಮಹತ್ವದ ದಾಖಲೆ ಕಲೆ ಹಾಕಿದ NIA

ಬೆಂಗಳೂರು,ಡಿ.2- ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದೆ. ನ.19ರಂದು ಮಂಗಳೂರಿನ ನಾಗೋರಿ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ ಹಿಂದೆ ಉಗ್ರ ಚಟುವಟಿಕೆಗಳ ಸುಳಿವು ಇರುವುದರಿಂದ ರಾಷ್ಟ್ರೀಯ ತನಿಖಾ ದಳ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ರಾಜ್ಯದ ಪೊಲೀಸರು ಈಗಾಗಲೇ ಸಮಗ್ರ ತನಿಖೆ ನಡೆಸಿ ಸಾಕಷ್ಟು ಮಾಹಿತಿಗಳನ್ನು ಪತ್ತೆಹಚ್ಚಿದ್ದಾರೆ. ಶಾರೀಕ್‍ಗೆ ಅಂತಾರಾಷ್ಟ್ರೀಯ ನಂಟಿರುವುದರಿಂದ ಕೇಂದ್ರೀಯ ತನಿಖಾ ಸಂಸ್ಥೆಗಳ ಸಹಭಾಗಿತ್ವ ಅನಿವಾರ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ […]

ಕಳಪೆ ಗುಣಮಟ್ಟದ ಕುಕ್ಕರ್ ಮಾರಾಟ : ಫ್ಲಿಪ್‍ಕಾರ್ಟ್ ಸಂಸ್ಥೆಗೆ 1ಲಕ್ಷ ದಂಡ

ನವದೆಹಲಿ,ಸೆ.24-ಗ್ರಾಹಕರಿಗೆ ಕಳಪೆ ಗುಣಮಟ್ಟದ ಕುಕ್ಕರ್ ಸರಬರಾಜು ಮಾಡಿದ ಫ್ಲಿಪ್ ಕಾರ್ಟ್ ಸಂಸ್ಥೆಗೆ ದೆಹಲಿ ಹೈಕೋರ್ಟ್ ಒಂದು ಲಕ್ಷ ದಂಡ ವಿಧಿಸಿದೆ. ಮಾತ್ರವಲ್ಲ ಸಂಸ್ಥೆಯಿಂದ ಮಾರಾಟ ಮಾಡಿರುವ ಎಲ್ಲಾ 598 ಕುಕ್ಕರ್‍ಗಳನ್ನು ಗ್ರಾಹಕರಿಂದ ವಾಪಸ್ ಪಡೆದು ಹಣ ಹಿಂತಿರುಗಿಸುವಂತೆಯೂ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂಸ್ಥೆ ಮಾರಾಟ ಮಾಡಿರುವ ಕುಕ್ಕರ್‍ಗಳು ಬಿಐಎಸ್ ಮಾನದಂಡ ಹೊಂದಿಲ್ಲ ಎಂದು ಸಿಸಿಪಿಎ ಹೊರಡಿಸಿದ ಆದೇಶದ ಮೇರೆಗೆ ಫ್ಲಿಪ್‍ಕಾರ್ಟ್ ಸಂಸ್ಥೆಗೆ ಒಂದು ಲಕ್ಷ ರೂ.ಗಳ ದಂಡ ವಿಧಿಸಿ, ದಂಡದ ಹಣವನ್ನು ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ […]