ಕೇರಳ ಸಹಕಾರಿ ಬ್ಯಾಂಕ್ ಏಜೆಂಟ್‍ನ 30.70 ಕೋಟಿ ಆಸ್ತಿ ಜಪ್ತಿ

ಕೊಚ್ಚಿ , ಡಿ. 6- ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕರುವನ್ನೂರ್ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಕಮಿಷನ್ ಏಜೆಂಟ್‍ನೊಬ್ಬನ 30.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಎ ಕೆ ಬಿಜೋಯ್ ಎಂಬ ಏಜೆಂಟ್ ಇಡಿ ಬಿಸಿ ಮುಟ್ಟಿಸಿದೆ, ಅಧಿಕಾರಿಗಳ ಪ್ರಕಾರ ಜಪ್ತಿಯಾದ ಆಸ್ತಿ ವಿವರ ನೋಡಿದರೆ ಅಚ್ಚರಿಯಾಗುತ್ತದೆ. ಕೇರಳ ರಾಜ್ಯದ ವಿವಿದೆಢೆ 20 ಸ್ಥಿರ ಆಸ್ತಿಗಳಿವೆ ಇದಲ್ಲದೆ ಎರಡು ಕಾರುಗಳು, 3,40 ಲಕ್ಷ ರೂ ನಗದು […]
ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ: 14 ಕಡೆ ಸಿಸಿಬಿ ದಾಳಿ..

ಬೆಂಗಳೂರು,ಅ.12- ನಗರದ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ನಗರದ 14 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ಬ್ಯಾಂಕ್ ಗ್ರಾಹಕರಿಗೆ ಅಧಿಕ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ವಂಚಿಸಿದೆ ಎಂದು ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಅದರಂತೆ ಸಿಸಿಬಿ ಇಂದು ಬೆಳಗ್ಗೆ ಕಾರ್ಯಾಚರಣೆ ಕೈಗೊಂಡು ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಜಾಲ ಸೇರಿದಂತೆ 14 […]
ಸಹಕಾರ ಮಂಡಳದಿಂದ ಶಿಕ್ಷಣ ನಿಧಿಗೆ 2 ಕೋಟಿ ರೂ. ಚೆಕ್ ಹಸ್ತಾಂತರ
ಬೆಂಗಳೂರು,ಆ.16- ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವತಿಯಿಂದ 2 ಕೋಟಿ ರೂ. ಮೊತ್ತದ ಶಿಕ್ಷಣ ನಿಧಿಯ ಚೆಕ್‍ನ್ನು ರಾಜ್ಯ ಸಹಕಾರ ಮಹಾಮಂಡಳಕ್ಕೆ ಹಸ್ತಾಂತರಿಸಲಾಯಿತು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು, ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಜಿ.ಟಿ.ದೇವೇಗೌಡರು, ಭಿನ್ನಾಭಿಪ್ರಾಯ ರಾಜಕೀಯವನ್ನು ಬಿಟ್ಟು, ಸಹಕಾರ ಕ್ಷೇತ್ರ ಉಳಿಸುವ ಕೆಲಸವನ್ನು ಮಾಡಬೇಕು. ಸಹಕಾರ ಕ್ಷೇತ್ರವನ್ನು ಮೆಟ್ಟಿಲಾಗಿ ಬಳಸಿಕೊಂಡು ರಾಜಕೀಯಕ್ಕೆ ಬರುತ್ತಾರೆ. ಶಾಸಕರು, […]