ಔಟ್‍ಪೋಸ್ಟ್ ನಲ್ಲಿ ಲಂಚ ಪಡೆಯುತ್ತಿದ್ದ ಕಾನ್‍ಸ್ಟೆಬಲ್ ಅಮಾನತು

ಬಲ್ಲಿಯಾ (ಉತ್ತರ ಪ್ರದೇಶ) , ಡಿ 26- ರಾಜ್ಯದ ಗಡಿಯಲ್ಲಿರುವ ಜನೇಶ್ವರ ಮಿಶ್ರಾ ಸೇತುವೆಯಲ್ಲಿ ಸರಕು ಸಾಗಣೆ ವಾಹನ ಚಾಲಕರಿಂದ 50 ರೂ ಲಂಚ ಪಡೆಯುತ್ತಿದ್ದ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ. ಉತ್ತರ ಪ್ರದೇಶ-ಬಿಹಾರ ಗಡಿಯ ಬಳಿ ಮಾಮೂಲಿ ವಸೂಲಿ ದಂಧೆ ನಡೆಯುತ್ತಿರುವ ಬಗ್ಗೆ ದೂರು ಬರುತ್ತಿತ್ತು ಪ್ರಸ್ತುತ ಕೆಲವರು 50 ರೂ ಪಡೆಯುತ್ತಿರುವುದನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಪ್‍ಲೋಡ್ ಮಾಡಲಾಗಿತ್ತು. ಇದು ಪೊಲೀಸರ ಕಾರ್ಯವೈಕರಿ ಬಗ್ಗೆ ಟೀಕೆಗಳು ಹೆಚ್ಚಾದಾಗ ಪೊಲೀಸ್ ವರಿಷ್ಠಾಧಿಕಾರಿ ಆರ್‍ಕೆ ನಯ್ಯರ್ ಅವರು […]
ಸಂಚಾರಿ ನಿಯಮ ಉಲ್ಲಂಘನೆ, ದಂಪತಿ ಬಂಧನ
ಪಾಲ್ಘರ್,ಸೆ.27- ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರರನ್ನು ತಡೆಯಲು ಮುಂದಾದ ಮಹಿಳಾ ಪೊಲೀಸ್ ಕಾನ್ಸ್‍ಟೆಬಲ್‍ರನ್ನು ತಳ್ಳಿ ಪರಾರಿಯಾಗಿದ್ದ ದಂಪತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಕಾನ್ಸ್‍ಟೆಬಲ್ ಪ್ರಜ್ಞೆ ಶಿರಾಮ್ ದಲ್ವಿ (36) ಅವರ ಕಾಲು ಮತ್ತು ಕೈಗಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಕೊಲೆ ಯತ್ನ ಪ್ರಕರಣ ಕೂಡ ದಾಖಲಾಗಿ ವಕೀಲ ಬ್ರಿಜೇಶ್ ಕುಮಾರ್ ಬೊಲೊರಿಯಾ ಮತ್ತು ಅವರ ಪತ್ನಿ ಡಾಲಿ ಕುಮಾರಿ ಸಿಂಗ್ ಅವರನ್ನು ಬಂಧಿಸಲಾಗಿದೆ. ಬೈಕ್ ಅನ್ನು ಜಪ್ತಿ ಮಾಡಲಾಗಿತ್ತು. […]