ಬೆಂಗಳೂರಲ್ಲಿ ಸೋಂಕಿತರ ಪ್ರಮಾಣ ಕೊಂಚ ಇಳಿಕೆ, ಇಂದು 24,748 ಕೇಸ್

ಬೆಂಗಳೂರು, ಜ.22- ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿದೆ. ಕಳೆದೆರಡು ದಿನಗಳ ಹಿಂದೆ 27 ಸಾವಿರ ಗಡಿ ದಾಟಿದ್ದ ಸೋಂಕಿತರ ಪ್ರಮಾಣ ನಿನ್ನೆ 26,790ಕ್ಕೆ ಇಳಿಕೆಯಾಗಿತ್ತು. ಇಂದು 24,748ಕ್ಕೆ ಬಂದು ನಿಂತಿದೆ. ನಿನ್ನೆಗಿಂತ ಇಂದು 2 ಸಾವಿರ ಪ್ರಕರಣಗಳು ಕಡಿಮೆ ದಾಖಲಾಗಿವೆ. ಬೊಮ್ಮನಹಳ್ಳಿ ವಲಯದಲ್ಲಿ 2824, ದಾಸರಹಳ್ಳಿ 639, ಬೆಂಗಳೂರು ಪೂರ್ವ 3714, ಮಹದೇವಪುರ 3983, ಆರ್ಆರ್ ನಗರ 1497, ದಕ್ಷಿಣ ವಲಯ 3139, ಪಶ್ಚಿಮ 1842, ಯಲಹಂಕ 1254, ಆನೇಕಲ್ 1857, ಬೆಂಗಳೂರು […]