ಬೆಂಗಳೂರಲ್ಲಿ ಮೈಕ್ರೋ ಕಂಟೈನ್‍ಮೆಂಟ್‍ಗಳ ಸಂಖ್ಯೆಯಲ್ಲಿ ಭಾರಿ ಏರಿಕೆ..!

ಬೆಂಗಳೂರು,ಜ.5-ಬಿಬಿಎಂಪಿ ವ್ಯಾಪ್ತಿಯಲ್ಲಿ ಹತ್ತು ವಾರ್ಡ್‍ಗಳಲ್ಲಿ ಎಂಟಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಳ್ಳಂದೂರು ವಾರ್ಡ್‍ನಲ್ಲಿ ಬರೊಬ್ಬರಿ 40 ಸೋಂಕಿತರು ಪತ್ತೆಯಾಗಿದ್ದರೆ, ದೊಡ್ಡನೆಕ್ಕುಂದಿಯಲ್ಲಿ 17, ಹಗದೂರು 15, ಎಚ್‍ಎಸ್‍ಆರ್ ಬಡಾವಣೆ 14, ಅರಕೆರೆ 13, ವರ್ತೂರು 13, ಹೊರಮಾವು 12, ಹೊಸತಿಪ್ಪಸಂದ್ರದಲ್ಲಿ 11, ಕೋರಮಂಗಲದಲ್ಲಿ 10 ಹಾಗೂ ಹೊಯ್ಸಳನಗರದಲ್ಲಿ 9 ಪ್ರಕರಣಗಳು ಬೆಳಕಿಗೆ ಬಂದಿವೆ. ನಗರದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಏರಿಕೆಯಾಗುತ್ತಿರುವುದರಿಂದ ಮೈಕ್ರೋ ಕಂಟೈನ್‍ಮೆಂಟ್ ಜೋನ್‍ಗಳ ಸಂಖ್ಯೆಯೂ ಏರಿಕೆಯಾಗುತ್ತಿವೆ. ಒಂದೇ ಸ್ಥಳದಲ್ಲಿ3ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ ಅಂತಹ […]