ಕೊರೊನಾ ತಪಾಸಣಾ ನಿಯಮದಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ

ಬೆಂಗಳೂರು,ಜ.28- ಶೀತ, ಕೆಮ್ಮು, ನೆಗಡಿ, ಜ್ವರದಿಂದ ನರಳುತ್ತಿರುವವರಿಗೆ ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಕಾಲ ಕಾಲಕ್ಕೆ ಕೊರೊನಾ ತಪಾಸಣಾ ವಿಧಾನ ಬದಲಿಸಿಕೊಳ್ಳುವಂತೆ ಐಸಿಎಂಆರ್ ನೀಡಿರುವ ವರದಿಯನ್ನಾಧರಿಸಿ ಸರ್ಕಾರ ಕೊರೊನಾ ತಪಾಸಣೆ ನೀತಿಯಲ್ಲಿ ಕೆಲ ಬದಲಾವಣೆ ತಂದಿದೆ. ರಾಜ್ಯದಲ್ಲಿರುವ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾ ತಪಾಸಣೆ ನಡೆಸುವುದರ ಜತೆಗೆ ಕೊಮಾರ್ಬಿಡಿಟಿ ರೋಗದಿಂದ ನರಳುತ್ತಿರುವವರನ್ನು ತಪಾಸಣೆ ನಡೆಸಲಾಗುವುದು. ವಿದೇಶ ಪ್ರಯಾಣ ಕೈಗೊಳ್ಳುವ ಹಾಗೂ ವಿದೇಶದಿಂದ ಆಗಮಿಸುವವರಿಗೆ ಆಧ್ಯತೆ ಮೇರೆಗೆ ಕಡ್ಡಾಯವಾಗಿ […]