3ನೇ ಅಲೆ ಎಫೆಕ್ಟ್ : 25 ದಿನಗಳಲ್ಲಿ 25 ಮಕ್ಕಳು ಕೊರೊನಾಗೆ ಬಲಿ..!

ಬೆಂಗಳೂರು,ಫೆ.12-ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿ ಅತಿ ಹೆಚ್ಚು ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿರುವು ಅಂಕಿ ಅಂಶಗಳಿಂದ ಉಲ್ಲೇಖವಾಗಿದೆ. ಕಳೆದ ಎರಡು ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆ ಸಂದರ್ಭದಲ್ಲೇ ಅತಿ ಹೆಚ್ಚು ಮಕ್ಕಳು ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ ಜ.17 ರಿಂದ ಇದುವರೆಗೂ ಬರೊಬ್ಬರಿ 25 ಮಕ್ಕಳು ಕೊರೊನಾ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೇವಲ 25 ದಿನಗಳಲ್ಲಿ 25 ಮಕ್ಕಳು ಪ್ರಾಣ ಕಳೆದುಕೊಂಡಿರುವುದರಿಂದ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡುವುದು ಅನಿವಾರ್ಯವಾಗಿದೆ. ಒಂದು ವರ್ಷ ತುಂಬದ […]