ಸುಪ್ರೀಂನ 250 ಸಿಬ್ಬಂದಿ, ಮೂವರು ನ್ಯಾಯಾಧೀಶರಿಗೆ ಕೊರೊನಾ

ನವದೆಹಲಿ, ಜ.10- ದೇಶವೇ ಆತಂಕದ ಕಣ್ಣುಗಳಿಂದ ನೋಡುತ್ತಿರುವ ಕೊರೊನಾ ಸೋಂಕು ಸುಪ್ರೀಂಕೋರ್ಟ್‍ನ ಮೂವರು ನ್ಯಾಯಾೀಧಿಶರಿಗೆ ತಗುಲಿದೆ. ಈ ಮೂಲಕ ಮೂರನೇ ಅಲೆಯಲ್ಲಿ ಸುಪ್ರೀಂಕೋರ್ಟ್‍ನ ಒಟ್ಟು ಒಂಬತ್ತು ಮಂದಿ ನ್ಯಾಯಾೀಧಿಶರು ಸೋಂಕಿಗೆ ಸಿಲುಕಿದಂತಾಗಿದೆ. ಸರ್ವೋಚ್ಚ ನ್ಯಾಯಾಲಯದ ಒಟ್ಟು 250 ಮಂದಿ ಸಿಬ್ಬಂದಿಗೂ ಸೋಂಕು ತಗುಲಿದೆ, ಅವರಲ್ಲಿ ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಉಳಿದವರು ಮನೆಯಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಪ್ರೀಂಕೋರ್ಟ್‍ನ ಪ್ರಧಾನ ಕಾರ್ಯದರ್ಶಿಯವರಿಗೂ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅರೆಸೇನಾ ಪಡೆಯ 600ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಸೋಂಕು ತಗುಲಿದೆ. […]