ಭಾರತದಾದ್ಯಂತ 24 ಗಂಟೆಯಲ್ಲಿ 1.72 ಲಕ್ಷ ಮಂದಿಗೆ ಕೊರೋನಾ, 1008 ಸಾವು..!

ನವದೆಹಲಿ, ಫೆ.3- ನಿನ್ನೆ ಒಂದೇ ದಿನದಲ್ಲಿ ಹೊಸದಾಗಿ 1,72,433 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಡುವುದರೊಂದಿಗೆ ಭಾರತದ ಕೋವಿಡ್-19 ಪ್ರಕರಣಗಳ ಒಟ್ಟು ಸಂಖ್ಯೆ 4,18,03,318ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,33,921ಕ್ಕೆ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 1008 ಜನರು ಕೊರೊನಾದಿಂದ ಮೃತಪಡುವುದರೊಂದಿಗೆ ಕೋವಿಡ್ ಮರಣ ಸಂಖ್ಯೆ 4,98,983ಕ್ಕೆ ತಲುಪಿದೆ. ಕೇರಳ ರಾಜ್ಯ ಒಂದರಲ್ಲೇ 500 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ. ಒಟ್ಟಾರೆ ಸೋಂಕುಗಳ ಪೈಕಿ ಸಕ್ರಿಯ ಪ್ರಕರಣಗಳು […]