ಶಾಕಿಂಗ್ : ಲಸಿಕೆ ಹಾಕಿಸಿಕೊಂಡವರನ್ನೇ ಕಾಡುತ್ತಿದೆ ಕೊರೊನಾ..!

ಬೆಂಗಳೂರು,ಜ.31- ಲಸಿಕೆ ಹಾಕಿಸಿಕೊಳ್ಳದವರಿಗಿಂತ ಲಸಿಕೆ ಪಡೆದವರಿಗೆ ಕೊರೊನಾ ಸೋಂಕು ಕಾಡುತ್ತಿರುವುದು ಬಿಬಿಎಂಪಿ ವರದಿಯಲ್ಲಿ ಬಹಿರಂಗಗೊಂಡಿದೆ. ಅದರಲ್ಲೂ ಈಗಾಗಲೆ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರನ್ನೇ ಕೊರೊನಾ ಕಾಡುತ್ತಿರುವುದು ಸಾಬೀತಾಗಿದೆ. ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ 505 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 505 ಮಂದಿಯಲ್ಲಿ 276 ಮಂದಿ ಎರಡು ಡೋಸ್ ಪಡೆದವರೆ ಇರುವುದು ಅಚ್ಚರಿಗೆ ಕಾರಣವಾಗಿದೆ. ಕೇವಲ 45 ಮಂದಿ ಸಿಂಗಲ್ ಡೋಸ್ ಹಾಕಿಸಿಕೊಂಡಿದ್ದರೂ ಸೋಂಕು ಕಾಣಿಸಿಕೊಂಡಿದ್ದರೆ, 184 ಮಂದಿ ಮಾತ್ರ ಇದುವರೆಗೂ ಲಸಿಕೆಯನ್ನೆ ಹಾಕಿಸಿಕೊಂಡಿಲ್ಲ. ಲಸಿಕೆ […]