ಮತ್ತೆ ಕರೋನಾ ಹಾವಳಿ : ಚೀನಾ ಪರಿಸ್ಥಿತಿ ಭಾರತಕ್ಕೆ ಬರಲ್ಲ ಎಂದ ತಜ್ಞರು

ನವದೆಹಲಿ,ಡಿ.22- ಭಾರತದಲ್ಲಿ ಕಾಣಿಸಿಕೊಂಡಿರುವ ಬಿಎಫ್. 7 ಮಾದರಿ ಸೋಂಕಿಗೂ ಚೀನಾದ ಕೋವಿಡ್ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಪರಿಸ್ಥಿತಿಗೂ ಇಲ್ಲಿನ ಪರಿಸ್ಥಿತಿಗೂ ಭಿನ್ನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾದಲ್ಲಿ ಕೊರೊನಾ ಉಲ್ಬಣಗೊಂಡಿದ್ದ ಸಂದರ್ಭದಲ್ಲಿ ಜನರ ರೋಗನಿರೋಧಕ ಶಕ್ತಿ ಅಭಿವೃದ್ಧಿಪಡಿಸದ ಕಾರಣ ಮತ್ತೆ ಅಲ್ಲಿ ಸೋಂಕು ಉಲ್ಬಣಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಭಾರತದಲ್ಲಿ ಕೊರೊನಾ ನಿಯಂತ್ರಣದ ಜತೆಗೆ ಬಿಎಫ್.7 ಮಾದರಿಯ ಸೋಂಕು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸೋಂಕು ಹರಡದಂತೆ ನೋಡಿಕೊಳ್ಳುವ ಉದ್ದೇಶದಿಂದ ಆರೋಗ್ಯ ಸಚಿವಾಲಯ ಮತ್ತೆ […]