ದೇಶಾದ್ಯಂತ 15 ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ

ನವದೆಹಲಿ, ಜ.3- ರೂಪಾಂತರಿ ಓಮಿಕ್ರಾನ್, ಕೋವಿಡ್ ಮೂರನೇ ಅಲೆಯ ನಡುವೆಯೂ ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಪ್ರೌಢಾವಸ್ಥೆಯ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭವಾಗಿದೆ. ಕೇಂದ್ರಾಡಳಿತ ಪ್ರದೇಶ ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಇಂದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೋವಿನ್ ಆಪ್‍ನಲ್ಲಿ ನಿನ್ನೆ ಸಂಜೆಯವರೆಗು ಆರು ಲಕ್ಷ ನೋಂದಣಿಯಾಗಿತ್ತು. ನೋಂದಣಿಯಾಗದೆ ಇದ್ದರು ನೇರವಾಗಿ ಲಸಿಕಾ ಸತ್ರಗಳಿಗೆ ಬಂದು ಕೋವ್ಯಾಕ್ಸಿನ್ ಡೋಸ್ ಪಡೆಯಲು ಅವಕಾಶ ಇದೆ. ಶಾಲಾ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಶಾಲೆಯೊಂದರಲ್ಲಿ ಪ್ರತಿ […]