ದಿನದ 24 ಗಂಟೆಯೂ ಕೋವಿಡ್ ಲಸಿಕೆ: ಸಚಿವ ಅಶ್ವತ್ಥನಾರಾಯಣ

ಬೆಂಗಳೂರು, ಜ.1- ಕೋವಿಡ್ 3 ನೇ ಅಲೆ ಎದುರಿಸಲು ಸಿದ್ದತೆ ಪ್ರಾರಂಭ ಮಾಡಿದ್ದು, 24 ಗಂಟೆ ಲಸಿಕೆ ಕೊಡುವ ಕೆಲಸ ಪ್ರಾರಂಭ ಮಾಡಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲಸಿಕೆ ನಮಲ್ಲಿ ಕೊರತೆ ಇಲ್ಲ. 15-18 ವರ್ಷ ಮಕ್ಕಳಿಗೆ ಸೋಮವಾರ ಲಸಿಕೆ ಅಭಿಯಾನ ಪ್ರಾರಂಭ ಆಗುತ್ತದೆ. 60 ವರ್ಷ ಮೇಲ್ಪಟ್ಟವರು ಮತ್ತು ಹೆಲ್ತï ವಾರಿಯರ್ಸ್ ಗೆ ಬೂಸ್ಟರ್ ಡೋಸ್ ಕೊಡಲು ಸಿದ್ದತೆ ಮಾಡಿದ್ದೇವೆ.ವೈದ್ಯರು, ಔಷಧಿ, ಸಿಬ್ಬಂದಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ […]