ದೇಶದಲ್ಲಿ ಕೊರೊನಾಗೆ ಮತ್ತೆ ನಾಲ್ವರು ಬಲಿ

ನವದೆಹಲಿ,ಮಾ.20-ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಗೊಳ್ಳುವ ಸೂಚನೆಗಳು ದೊರೆತಿದ್ದು, ನಿನ್ನೆ ಒಂದೇ ದಿನ ಮಹಾಮಾರಿಗೆ ನಾಲ್ಕು ಜೀವಗಳು ಬಲಿಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಂದೇ ದಿನದಲ್ಲಿ 918 ಹೊಸ ಕರೋನವೈರಸ್ ಪ್ರಕರಣಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,350 ಕ್ಕೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಇಬ್ಬರು ಹಾಗೂ ಕರ್ನಾಟಕ ಮತ್ತು ಕೇರಳ ತಲಾ ಒಬ್ಬೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿರುವುದರಿಂದ ಕೊರೊನಾ ಸಾವಿನ ಸಂಖ್ಯೆ 5,30,806 ಕ್ಕೆ ಏರಿಕೆಯಾಗಿರುವುದು ಕಂಡು ಬಂದಿದೆ. ಇಂದು ಬೆಳಿಗ್ಗೆ 8 ಗಂಟೆಗೆ […]

ಆಕ್ಸಿಜನ್ ದಾಸ್ತಾನು ಖಚಿತ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚನೆ

ನವದೆಹಲಿ,ಡಿ.24- ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಭಾರಿ ಅನಾವುತ ಮಾಡುತ್ತಿರುವ ಬೆನ್ನಲ್ಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, ದ್ರವರೂಪದ ವೈದ್ಯಕೀಯ ಆಮ್ಲಜನಕ ಲಭ್ಯತೆ ಮೇಲೆ ನಿಗಾ ವಹಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ಮನೋಹರ್ ಅಗ್ನಿನಿ ಅವರು, ಪಿಎಸ್‍ಎ ಪ್ಲಾಂಟ್‍ಗಳು ಪೂರ್ಣ ಪ್ರಮಾಣ ಹಾಗೂ ನಿಯಮಿತವಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮಾಕ್ ಡ್ರಿಲ್ ಮಾಡುವಂತೆ […]

ಸರ್ಕಾರ ಮತ್ತು ರೋಗಿಗಳಿಂದ ಹಣ ಪಡೆದ 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್

ಬೆಂಗಳೂರು, ಆ.21- ಕೋವಿಡ್ ರೋಗಿಗಳಿಂದ ಶುಲ್ಕ ಪಡೆಯುವುದರ ಜೊತೆಗೆ, ಸರ್ಕಾರದಿಂದಲೂ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ವಹಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, 577 ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ 403 ರೋಗಿಗಳ ಕುಟುಂಬಗಳಿಗೆ 1,58,22,359 ರೂ.ಗಳನ್ನು ಹಿಂದಿರುಗಿಸಿ, ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಸುಧಾಕರ್, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರದಿಂದ ಹಣ ಪಡೆಯುವುದರ ಜೊತೆಗೆ ಕೋವಿಡ್ ರೋಗಿಗಳಿಂದಲೂ ಶುಲ್ಕ ವಸೂಲಿ […]

ದೇಶದಾದ್ಯಂತ 24 ಗಂಟೆಯಲ್ಲಿ 18,257 ಮಂದಿಗೆ ಕೊರೋನಾ

ನವದೆಹಲಿ, ಜುಲೈ 10-ಕಳೆದ 24 ತಾಸಿನಲ್ಲಿ 18,257 ಹೊಸ ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ,42 ಜನ ಅಸುನೀಗಿದ್ದಾರೆ.್ತ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸಕ್ರಿಯ ಪ್ರಕರಣಗಳು 1,28,690 ಕ್ಕೆ ಏರಿಕೆಯಾಗಿದ್ದು ,ಪ್ರತಿದಿನ ಏರಿಳಿತ ದಾಖಲಾಗುತ್ತಿದೆ ಆದರೆ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.30 ಪ್ರತಿಶತವನ್ನು ಒಳಗೊಂಡಿವೆ, ಆದರೆ ಚೇತರಿಕೆ ದರವು 98.50 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸಾವಿನ ಪ್ರಮಾಣ ಶೇ 1ಕ್ಕಿಂತ ಹೆಚ್ಚಾಗಿದ್ದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳು […]