ಕೇರಳದಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಕಗ್ಗೊಲೆ

ಕಣ್ಣೂರು(ಕೇರಳ),ಫೆ.21- ಇಂದು ನಸುಕಿನ ಜಾವ ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸಿಪಿಐ(ಎಂ) ಕಾರ್ಯಕರ್ತರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ವೃತ್ತಿಯಲ್ಲಿ ಮೀನುಗಾರರಾಗಿರುವ ಹರಿದಾಸನ್ ಅವರನ್ನು ನ್ಯೂ ಮಾಹೆ ಸಮೀಪದ ಪುನ್ನೋಲ್‍ನಲ್ಲಿರುವ ಅವರ ಮನೆ ಎದುರು ನಸುಕಿನ ಜಾವ 1.30ರಲ್ಲಿ ಹೊರಗೆಳೆದು ದುಷ್ಕರ್ಮಿಗಳ ಗುಂಪೊಂದು ಕೊಚ್ಚಿ ಕೊಲೆಗೈದಿದೆ ಎಂದು ಆಪಾದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಹರಿದಾಸನ್ ಹತ್ಯೆಗೀಡಾಗಿದ್ದಾರೆ. ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ನೆರೆ ಹೊರೆಯವರು 54 ವರ್ಷದ ಕಣ್ಣದಾಸನ್ ಅವರನ್ನು ಕೂಡಲೇ […]