ಕ್ರೇಜಿಸ್ಟಾರ್ ರವಿಚಂದ್ರನ್‍ ತಾಯಿ ಪಟ್ಟಮ್ಮಾಳ್ ವೀರಾಸ್ವಾಮಿ ವಿಧಿವಶ

ಬೆಂಗಳೂರು, ಫೆ. 28- ಸ್ಯಾಂಡಲ್‍ವುಡ್‍ನ ಪ್ರಿನ್ಸಿಪಾಲ್ ಎಂದೇ ಖ್ಯಾತರಾಗಿರುವ ಕೇಜ್ರಿಸ್ಟಾರ್ ರವಿಚಂದ್ರನ್‍ರ ತಾಯಿ ಪಟ್ಟಮ್ಮಾಳ್ ವೀರಾಸ್ವಾಮಿ (83) ಅವರು ಇಂದು ಬೆಳಗ್ಗೆ 6.30ರಲ್ಲಿ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ 10 ವರ್ಷಗಳಿಂದ ಪಟ್ಟಮ್ಮಾಳ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಕೇಜ್ರಿಸ್ಟಾರ್ ರವಿಚಂದ್ರನ್, ಬಾಲಾಜಿ ಸೇರಿದಂತೆ ಐವರು ಮಕ್ಕಳನ್ನು ಅಗಲಿದ್ದಾರೆ. ಅಲ್‍ಜೈಮರ್ಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಪಟ್ಟಮ್ಮಾಳ್ ಅವರು ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರು. ಕೆಲವು ಸಂದರ್ಶನದಲ್ಲಿ ರವಿಚಂದ್ರನ್ ತಮ್ಮ ತಾಯಿ ಸ್ಥಿತಿಯನ್ನು ನೆನೆದು ಭಾವುಕರಾಗಿದ್ದರು. ನೆನಪಿನ ಶಕ್ತಿ ಕಳೆದುಕೊಂಡಿದ್ದರು. […]