200 ಕೋಟಿ ಡೋಸೇಜ್ : ಭಾರತ ಹೊಸ ಮೈಲಿಗಲ್ಲು

ನವದೆಹಲಿ,ಜು.17- ಕೋವಿಡ್ ವಿರುದ್ಧ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿರುವ ಭಾರತ ಸರ್ಕಾರ, ಒಟ್ಟು 200 ಕೋಟಿ ಡೋಸೇಜ್ ಲಸಿಕೆಗಳನ್ನು ನೀಡುವ ಮೂಲಕ ಇಂದಿಗೆ ದಾಖಲಾರ್ಹ ಸಾಧನೆ ಮಾಡಿದೆ. 2021ರ ಜನವರಿ 16ರಂದು 18 ತಿಂಗಳ ಹಿಂದೆ ಆರಂಭವಾದ ಕೋವಿಡ್ ಲಸಿಕಾ ಅಭಿಯಾನ ಹಂತ ಹಂತವಾಗಿ ಜನಪ್ರಿಯತೆ ಪಡೆದು ಏಳು ಹಂತಗಳಲ್ಲಿ ಅಭಿಯಾನ ನಡೆದಿದೆ. ಪ್ರಧಾನಿ ನರೇಂದ್ರಮೋದಿ ಅವರ ದೃಢ ನಾಯಕತ್ವದಲ್ಲಿ ಮಹತ್ ಸಾಧನೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ, ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ,ಕರ್ನಾಟಕದ […]