ಆನ್‍ಲೈನ್ ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

ಬೆಂಗಳೂರು, ನ.14- ಆನ್‍ಲೈನ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸೈಬರ್ ಸಂಬಂಧಿತ ಅಪರಾಧಗಳಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಲು ಹೋಗಿ ಇಂಜಿನಿಯರ್ ಸೇರಿದಂತೆ ನಗರದ ಇಬ್ಬರು ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಇಂಜಿನಿಯರ್ ದೀಪಿಕಾ ಎಂಬುವರು ಫೆಸ್‍ಬುಕ್ ಖಾತೆಯಲ್ಲಿನ ಜಾಹಿರಾತು ನೋಡಿ ಅದರಲ್ಲಿದ್ದ ಫೋನ್ ನಂಬರ್‍ಗೆ ಫುಡ್ ಆರ್ಡ್‍ರ್ ಮಾಡಲು ಕರೆ ಮಾಡಿದ್ದಾರೆ, ಕರೆ ಸ್ವೀಕರಿಸಿದ ವ್ಯಕ್ತಿ ಖಾಂದಾನಿ ರಾಜಧಾನಿ ರೆಸ್ಟೋರೆಂಟ್ ಎಂದು ಪರಿಚಯಿಸಿಕೊಂಡಿದ್ದಾರೆ. ಆರ್ಡರ್ ಬುಕ್ ಮಾಡಲು ನಾವು ಕಳುಹಿಸುವ ಲಿಂಕ್‍ನಲ್ಲಿರುವ […]