150 ದೇಶಗಳಿಗೆ ಕೊರೊನಾ ಲಸಿಕೆ ಸರಬರಾಜು ಮಾಡಿದ್ದೇವೆ ; ಮಾಂಡವಿಯಾ

ನವದೆಹಲಿ,ಮಾ.11-ಕೊರೊನಾ ಸಂದರ್ಭದಲ್ಲಿ ನಾವು 150 ದೇಶಗಳಿಗೆ ಅಗ್ಗದ ಬೆಲೆಗೆ ಲಸಿಕೆ ಸರಬರಾಜು ಮಾಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ದೆಹಲಿಯಲ್ಲಿ ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತವು 150 ದೇಶಗಳಿಗೆ ಔಷಧಗಳನ್ನು ಬೆಲೆಯನ್ನು ಹೆಚ್ಚಿಸದೆ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಕಳುಹಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ವಿಶ್ವದ ಲಸಿಕೆ ಅಗತ್ಯತೆಯ ಶೇ.65ರಷ್ಟು ಭಾರತವನ್ನು ಪೂರೈಸುತ್ತದೆ ಎಂದು ಮಾಂಡವಿಯಾ […]
ನಿಲ್ಲದ ಮೂಲ ವಲಸಿಗರ ಸಂಘರ್ಷ : ಬಿಜೆಪಿಗೆ ಬಿಕ್ಕಟ್ಟು

ಬೆಂಗಳೂರು,ಮಾ.9- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಮತ್ತೆ ಅಧಿಕಾರಕ್ಕೆ ಬರಲು ಹೆಣ ಗಾಡುತ್ತಿರುವ ಆಡಳಿತರೂಢ ಬಿಜೆಪಿಗೆ ಹಾಲಿ ಸಚಿವರನ್ನು ಮತ್ತು ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಬೆಳವಣಿಗೆಗಳ ನಡುವೆಯೇ ಮೂಲ ಮತ್ತು ವಲಸಿಗರ ನಡುವೆ ಸಂಘರ್ಷ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚುತ್ತಿರುವುದು ಕಮಲ ಪಾಳೆಯ ವಿಧಾನಸಭೆಯ ಚುನಾವಣೆಗೂ ಮುನ್ನವೇ ವಿಲ ವಿಲ ಎನ್ನುವಂತಾಗಿದೆ.ಕ್ಷೇತ್ರದಲ್ಲಿ ಆಡಳಿತಾ ವಿರೋಧಿ ಎದುರಿಸುತ್ತಿರುವ ಕೆಲವು ಶಾಸಕರು ಮತ್ತು ಸಚಿವರು ಪಕ್ಷಕ್ಕೆ ಗುಡ್ ಬೈ ಹೇಳಿ ಅನ್ಯಪಕ್ಷಗಳತ್ತ ಮುಖ ಮಾಡಿದ್ದರೆ, ಟಿಕೆಟ್ […]
ಭಾರತದಲ್ಲೂ ಆರ್ಥಿಕ ಹಿಂಜರಿತ : ಸತ್ಯ ಮುಚ್ಚಿಡುತ್ತಿರುವ ಕೇಂದ್ರ ಸರ್ಕಾರ

ನವದೆಹಲಿ,ಜ.17- ಮುಂದಿನ ಜೂನ್ ನಂತರ ಭಾರತದಲ್ಲೂ ಆರ್ಥಿಕ ಹಿಂಜರಿತದ ಪರಿಣಾಮ ಎದುರಾಗಲಿದೆ ಎಂದು ಕೇಂದ್ರ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಪ್ರಧಾನ ಮಂತ್ರಿ ಮತ್ತು ಕೇಂದ್ರ ಹಣಕಾಸು ಸಚಿವರು ದೇಶದ ಜನರಿಂದ ಏನನ್ನು ಮುಚ್ಚಿಡಲು ಬಯಸುತ್ತಿದ್ದಾರೆ ಎಂದು ಪ್ರಶ್ನಿಸಿದೆ. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‍ಎಂಇ) ಸಚಿವ ನಾರಾಯಣರಾಣೆ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈಗಾಗಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಕಾಡುತ್ತಿದೆ. ಭಾರತದಲ್ಲಿ ಜೂನ್ ಬಳಿಕ ಅದರ ಪರಿಣಾಮ […]
ಪಾಕಿಸ್ತಾನದಲ್ಲಿ 1 ಕೆಜಿ ಈರುಳ್ಳಿಗೆ 300ರೂ.

ಕರಾಚಿ,ಜ.11- ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಒಂದು ಕೆಜಿ ಈರುಳ್ಳಿ ಬೆಲೆ 300ರೂಗೆ ತಲುಪಿದೆ. ಕಳೆದ 2022ರಲ್ಲಿ ಉಂಟಾದ ಭೀಕರ ಪ್ರವಾಹದಿಂದ ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿದ್ದು ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಮೊದಲೇ ಬೆಲೆ ಏರಿಕೆ ಜನರನ್ನು ಕಂಗಾಲು ಮಾಡಿದೆ. ಒಂದು ಕೆಜಿ ಈರುಳ್ಳಿ ಬೆಲೆ 300ರೂ ದಾಟಿದ್ದು , ತೈಲ ಬೆಲೆಯೂ ಶೇ. 48ರಷ್ಟು ಏರಿಕೆಯಾಗಿದೆ. ಅಕ್ಕಿ, ಬೇಳೆಕಾಳುಗಳು, ಗೋ ಶೇ.50ರಷ್ಟು ಏರಿಕೆ ಕಂಡಿವೆ. ಯಾವುದು ಕೂಡ 400 ರೂ ಕಳಗೆ ಇಲ್ಲ.ಇನ್ನೊಂದೆಡೆ ಪಾಕಿಸ್ತಾನ ಸರ್ಕಾರ […]