ಈಶ್ವರಪ್ಪನವರು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ : ಸಿ.ಟಿ.ರವಿ

ಬೆಂಗಳೂರು,ಫೆ.18- ಸಚಿವ ಈಶ್ವರಪ್ಪ ತಪ್ಪೇ ಮಾಡದೇ ಇರುವಾಗ ಏಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪನವರು ರಾಷ್ಟ್ರಗೀತೆ ಕುರಿತು ಎಲ್ಲಿಯೂ ಅಪಮಾನ ಮಾಡಿಲ್ಲ. ಅವರು ಅಗೌರವನ್ನು ತೋರಿಸುವಂತಹ ಏನೂ ಮಾಡಿಲ್ಲ. ಅವರು ಏಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ರಾಷ್ಟ್ರಗೀತೆ ಬಗ್ಗೆ ನಮಗೆ ಎಷ್ಟು ಗೌರವವಿದೆಯೋ ಕೇಸರಿ ಧ್ವಜಕ್ಕೂ ಅಷ್ಟೇ ಗೌರವವಿದೆ. ಕೇಸರಿ ಶಾಂತಿ […]