ಕೇಂದ್ರ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಸಾಮಾನ್ಯ ಪರೀಕ್ಷೆ

ನವದೆಹಲಿ, ಆ.2- ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಸ್ನಾತಕೋತ್ತರ ಮತ್ತು ಪಿಎಚ್‍ಡಿ ಕೋರ್ಸ್‍ಗಳ ಪ್ರವೇಶಕ್ಕೆ ಸೆಪ್ಟಂಬರ್ 1ರಿಂದ 11ರವರೆಗೆ ದೇಶ ಹಾಗೂ ವಿದೇಶಗಳ ನಗರಗಳಲ್ಲಿ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ) ನಡೆಯಲಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಧ್ಯಕ್ಷ ಮಹಿದಾಲ ಜಗದೀಶ್ ಕುಮಾರ್ ಅವರು ಟ್ವೀಟ್ ಮೂಲಕ ಪರೀಕ್ಷೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿಯುಇಟಿ ಪರೀಕ್ಷೆಗಳಿಗೆ ಸೆಪ್ಟಂಬರ್ 1ರಿಂದ 7 ತಾರೀಖಿನವರೆಗೆ ಮತ್ತು 9ರಿಂದ 11ನೇ ತಾರೀಖಿನವರೆಗೆ ನಡೆಯಲಿವೆ. ದೇಶದ 500 ನಗರಗಳು ಹಾಗೂ ವಿದೇಶದ 13 ನಗರಗಳಲ್ಲಿ ಪರೀಕ್ಷೆಗಳು […]