ಭಾರತದಲ್ಲಿ ‘ಸೈಲೆಂಟ್’ ಆದ ಕೊರೋನಾ

ನವದೆಹಲಿ,ಜ.17- ಚೀನಾ, ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ರೂಪಾಂತರಿಗಳು ಭಾರೀ ಅನಾಹುಸತ ಸೃಷ್ಟಿಸಿದ್ದರೆ, ಭಾರತದಲ್ಲಿ ಕೋವಿಡ್ ಇತಿಹಾಸದಲ್ಲೇ ಅತಿ ಕಡಿಮೆ ಪ್ರಕರಣಗಳು ದಾಖಲಾಗಿ, ನಿಟ್ಟುಸಿರು ಬಿಡುವಂತೆ ಮಾಡಿವೆ. ಇಂದು ಬೆಳಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಅಂಕಿ ಸಂಖ್ಯೆಗಳ ಪ್ರಕಾರ ನಿನ್ನೆ 89 ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,035ರಷ್ಟು ಕುಸಿದಿದೆ. ದೇಶದಲ್ಲಿ ಆರಂಭದಿಂದಲೂ ಈವರೆಗೆ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 4,46,81,233ರಷ್ಟಾಗಿದೆ. ಸಾವಿನ ಸಂಖ್ಯೆ 5,30,726ರಷ್ಟಕ್ಕೆ ತಟಸ್ಥವಾಗಿದೆ. […]