ಕಾಂಬೋಡಿಯನ್ ರಾಜನ ನಿವಾಸಕ್ಕೆ ಬೆಂಕಿ

ನಾಮ್ ಪೆನ್,ಮಾ.13- ಪ್ರಸಿದ್ಧ ದೇವಾಲಯದ ಸಂಕೀರ್ಣದ ಸಮೀಪವಿರುವ ಕಾಂಬೋಡಿಯಾದ ರಾಜ ನೊರೊಡೊಮ್ ಸಿಹಾಮೋನಿ ಅವರ ಪ್ರಾಂತೀಯ ನಿವಾಸಕ್ಕೆ ಬೆಂಕಿ ಬಿದ್ದಿದ್ದು, ಆಸ್ತಿ ನಷ್ಟವಾಗಿದೆ. ವಾಯುವ್ಯ ನಗರದ ಸಿಯೆಮ್ ರೀಪ್‍ನಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸಂಕೀರ್ಣದಲ್ಲಿನ ಸಣ್ಣ ಕಟ್ಟಡವೊಂದರ ಮೇಲ್ಛಾವಣಿಗೆ ಹಾನಿಯಾಗಿದೆ. 69ರ ಹರೆಯದ ರಾಜ ಸಿಹಾಮೋನಿ ಪ್ರಸ್ತುತ ವೈದ್ಯಕೀಯ ತಪಾಸಣೆಗಾಗಿ ಬೀಜಿಂಗ್‍ನಲ್ಲಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಮಾಹಿತಿ ಸಚಿವ ಖಿಯು ಕನ್ಹರಿತ್ ತಿಳಿಸಿದ್ದಾರೆ. ರಾಜಭವನದ ಸಚಿವಾಲಯದಲ್ಲಿನ ಬೆಂಕಿ ಅನಾವುತಕ್ಕೆ ವಿದ್ಯುತ್ ದೋಷ ಕಾರಣವಾಗಿರಬಹುದು […]

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆ ನಾಶ

ಶ್ರೀನಗರ,ಫೆ.20- ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆಗಳು ನೆಲಸಮವಾಗಿದೆ. ಸಂತ್ರಸ್ಥ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಂಬನ್ ಜಿಲ್ಲೆಯ ಸಂಗಲ್ದನ್‍ಗೂಲ್ ರಸ್ತೆ ಸಮೀಪದ ಗೂಲ್ ತಹಸಿಲ್‍ನ ಸಂಗಲ್ದಾನ್ ದುಕ್ಸರ್ ದಲ್ವಾದ ಸುಮಾರು ಒಂದು ಚದುರ ಕಿ.ಮೀ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತದಿಂದ 13 ಮನೆಗಳು ನೆಲಸಮವಾಗಿದ್ದು, ಎಲ್ಲಾ ಸಂತ್ರಸ್ತ ಕುಟುಂಬಗಳನ್ನು ಟೆಂಟ್‍ಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಕಂಬಳಿಗಳು ಮತ್ತು ಪಾತ್ರೆಗಳನ್ನು ಸಹ ಒದಗಿಸಲಾಗಿದೆ. ಸೇನೆಯು ಅವರಿಗೆ ಆಹಾರವನ್ನೂ ನೀಡುತ್ತಿದೆ ಎಂದು ಅವರು ಮಾಹಿತಿ […]

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಬೌದ್ಧ ದೇವಾಲಯಕ್ಕೆ ಬೆಂಕಿ

ಮೆಲ್ಬೋರ್ನ್, ಫೆ. 6 -ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಬೌದ್ಧ ದೇವಾಲಯಕ್ಕೆ ಬೆಂಕಿ ಬಿದ್ದು ಹಾನಿಗೊಂಡಿದೆ. ಸುಮಾರು 80 ಅಗ್ನಿಶಾಮಕ ದಳ ತಂಡ ಬ್ರೈಟ್ ಮೂನ್ ಬೌದ್ಧ ದೇವಾಲಯದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರಯಾಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿಯಿಂದ ಯಾರಿಗೂ ಗಾಯಗಳಿಲ್ಲ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಸಹಾಯಕ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾಲ್ ಫೋಸ್ಟರ್ ತಿಳಿಸಿದ್ದಾರೆ. ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ, 95 ಮಂದಿ ಸಾವು ಇದು ಕೇವಲ ಪೂಜಾ ಸ್ಥಳವಲ್ಲ, […]