ದತ್ತಮಾಲಾ ಅಭಿಯಾನಕ್ಕೆ ಇಂದು ತೆರೆ

ಚಿಕ್ಕಮಗಳೂರು, ನ.13- ಶ್ರೀರಾಮ ಸೇನೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನಕ್ಕೆ ಇಂದು ವಿದ್ಯುಕ್ತವಾಗಿ ತೆರೆ ಬಿದ್ದಿತು. ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶಂಕರಮಠದಿಂದ ಆರಂಭ ವಾದ ಶೋಭಾ ಯಾತ್ರೆ ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್‍ನಲ್ಲಿ ಅಂತ್ಯಗೊಂಡಿತು. ಶೋಭಾಯಾತ್ರೆಗೆ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಕೋಲಾರ, ಮಡಿಕೇರಿ ಇನ್ನಿತರ ಕಡೆಗಳಿಂದ ಶ್ರೀರಾಮ ಸೇನೆಯ ದತ್ತಮಾಲಾಧಾರಿಗಳು ಪಾಲ್ಗೊಂಡಿದ್ದರು. ಶೋಭಾ ಯಾತ್ರೆಯಲ್ಲಿ ದತ್ತ ವಿಗ್ರಹ ಇಟ್ಟು, ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ದತ್ತ ಮಾಲಾಧಾರಿಗಳಿಂದ ಜಯಕಾರದ ಘೋಷಣೆ ದಾರಿಯುದ್ದಕ್ಕೂ ಮೊಳಗಿದವು. […]