ದೇಶದಲ್ಲಿ ಕೊರೊನಾಗೆ ಮತ್ತೆ ನಾಲ್ವರು ಬಲಿ

ನವದೆಹಲಿ,ಮಾ.20-ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಗೊಳ್ಳುವ ಸೂಚನೆಗಳು ದೊರೆತಿದ್ದು, ನಿನ್ನೆ ಒಂದೇ ದಿನ ಮಹಾಮಾರಿಗೆ ನಾಲ್ಕು ಜೀವಗಳು ಬಲಿಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಂದೇ ದಿನದಲ್ಲಿ 918 ಹೊಸ ಕರೋನವೈರಸ್ ಪ್ರಕರಣಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,350 ಕ್ಕೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಇಬ್ಬರು ಹಾಗೂ ಕರ್ನಾಟಕ ಮತ್ತು ಕೇರಳ ತಲಾ ಒಬ್ಬೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿರುವುದರಿಂದ ಕೊರೊನಾ ಸಾವಿನ ಸಂಖ್ಯೆ 5,30,806 ಕ್ಕೆ ಏರಿಕೆಯಾಗಿರುವುದು ಕಂಡು ಬಂದಿದೆ. ಇಂದು ಬೆಳಿಗ್ಗೆ 8 ಗಂಟೆಗೆ […]

BIG NEWS : ಕರ್ನಾಟಕ, ಹರಿಯಾಣದಲ್ಲಿ H3N2ಗೆ ಇಬ್ಬರು ಬಲಿ

ನವದೆಹಲಿ,ಮಾ.10- ಇತ್ತಿಚೆಗೆ ಕಾಣಿಸಿಕೊಂಡಿರುವ ಎಚ್3ಎನ್2 ವೈರಸ್‍ಗೆ ಕರ್ನಾಟಕದಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಎಚ್3ಎನ್2 ವೈರಸ್‍ನಿಂದ ಕಾಣಿಸಿಕೊಂಡ ಜ್ವರದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳುತಿಳಿಸಿವೆ. ಕರ್ನಾಟಕ ಹಾಗೂ ಹರಿಯಾಣದಲ್ಲಿ ಒಬ್ಬೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ. ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ದೇಶದಲ್ಲಿ ಸುಮಾರು 90 ಎಚ್3ಎನ್2 ಪ್ರಕರಣಗಳ ಜತೆಗೆ ಎಂಟು ಎಚ್ ಎನ್ 1 ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ. ದೇಶದಲ್ಲಿ ಕೊರೊನಾ ಮಹಾಮಾರಿಗೆ ಮತ್ತೆ ಮೂರು ಬಲಿ ದೇಶದಲ್ಲಿ ಜ್ವರ ಪ್ರಕರಣಗಳು […]

ಸುಟ್ಟು ಕರಕಲಾದವರು ಗೋ ಭಕ್ಷಕರು ಎಂದು ದೃಡ

ಭಿವಾನಿ,ಫೆ.27-ಹರಿಯಾಣದಲ್ಲಿ ಕಾರಿನಲ್ಲಿ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿದ್ದ ಎರಡು ಶವಗಳು ಗೋ ಭಕ್ಷಕರಾದ ಜುನೈದ್ ಮತ್ತು ನಾಸೀರ್ ಎಂಬುವರದ್ದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ದೃಡಪಡಿಸಿದೆ ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ರಾಜಸ್ಥಾನದ ಭರತ್‍ಪುರ ಮೂಲದ ವ್ಯಕ್ತಿಗಳ ಶವಗಳು ಫೆಬ್ರವರಿ 16 ರಂದು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ವಾಹನದೊಳಗೆ ಪತ್ತೆಯಾಗಿದ್ದವು. ಮೃತರ ಕುಟುಂಬಗಳು ಅವರನ್ನು ಬಜರಂಗದಳದ ಸದಸ್ಯರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮತ್ತೆ ಪರಮಾಣು ಬೆದರಿಕೆ ಹಾಕಿದ ರಷ್ಯಾ ಅಧ್ಯಕ್ಷ ಪುಟಿನ್ […]

ಆಂಧ್ರ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ

ಅಮರಾವತಿ,ಜ.3- ಕಾಲ್ತುಳಿದಿಂದ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಸಾರ್ವಜನಿಕ ಸಭೆ ಮತ್ತು ರ್ಯಾಲಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಪ್ರತಪಕ್ಷ ತೆಲುಗು ದೇಶಂ ಪಕ್ಷದ ನಾಯಕ ಚಂದ್ರ ಬಾಬು ನಾಯ್ಡು ಅವರ ನೇತೃತ್ವದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಘಟಿಸಿದ ಕಾಲ್ತುಳಿತದಿಂದ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು. ಡಿಸೆಂಬರ್ 28ರಂದು ನೆಲ್ಲೂರು ಜಿಲ್ಲೆಯ ಕಂಡುಕುರಿನಲ್ಲಿ ನಡೆದ ಮೊದಲ ಕಾರ್ಯಕ್ರಮದಲ್ಲಿ ಕಾಲ್ತುಳಿತದಿಂದ ಏಳು ಮಂದಿ ಮೃತಪಟ್ಟಿದ್ದರು. ಅದೇ ರೀತಿ ಭಾನುವಾರ ಗುಂಟೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ […]

ಯುವ ಜನಾಂಗಕ್ಕೆ ಮಾರಕವಾಗಲು ಹೃದಯಘಾತ ಇಲ್ಲಿದೆ ಹಲವು ಕಾರಣ

ಬೆಂಗಳೂರು,ನ.12- ಈ ಹಿಂದೆ 60 ವರ್ಷ ದಾಟಿದವರನ್ನು ಮಾತ್ರ ಕಾಡುತ್ತಿದ್ದ ಹೃದಯಘಾತದಂತಹ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಯುವಕರನ್ನು ಕಾಡುತ್ತಿರುವುದಕ್ಕೆ ಹವಾಮಾನ ವೈಪರಿತ್ಯ, ಮಣ್ಣಿನ ವೈಫಲ್ಯ ಹಾಗೂ ವಾಯು ಮಾಲಿನ್ಯ ಕಾರಣ ಎಂಬುದು ಇದೀಗ ಬಹಿರಂಗಗೊಂಡಿದೆ. ಹದಿ ಹರಯದ ಯುವಕರು ಹೃದಯಘಾತಕ್ಕೆ ಒಳಗಾಗುತ್ತಿರುವುದಕ್ಕೆ ಮಾಲಿನ್ಯವೇ ಕಾರಣ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಖ್ಯಾತ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಖಚಿತಪಡಿಸಿದ್ದಾರೆ. ಕಳೆದ 5 ವರ್ಷದಲ್ಲಿ 7 ಸಾವಿರಕ್ಕೂ ಹೆಚ್ಚು ಯುವಕರು ಹೃದಯಘಾತಕ್ಕೆ ಒಳಗಾಗಿರುವ ಮಾಹಿತಿಯನ್ನಾಧರಿಸಿ ಜಯದೇವ ಆಸ್ಪತ್ರೆ […]