ಭಾರತದಲ್ಲಿ ನಡೆಯುವ IMF ದುಂಡು ಮೇಜಿನ ಸಭೆಗೆ ಚೀನಾ ಹಣಕಾಸು ಸಚಿವರು

ನವದೆಹಲಿ,ಫೆ.6-ಇದೇ ತಿಂಗಳು ಭಾರತದಲ್ಲಿ ನಡೆಯಲಿರುವ ಸಾಲದಾತರು ಮತ್ತು ಸಾಲ ಪಡೆಯುವ ದೇಶಗಳ ದುಂಡು ಮೇಜಿನ ಸಭೆಯಲ್ಲಿ ಚೀನಾ ಹಣಕಾಸು ಸಚಿವ ಹಾಗೂ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಗವರ್ನರ್ ಪಾಲ್ಗೊಳ್ಳುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಷಯ ಖಚಿತಪಡಿಸಿರುವ ಅವರು, ಕಡಿಮೆ ಆದಾಯದ ದೇಶಗಳು ಸಾಲ ಪಾವತಿಸಲು ಸಾಧ್ಯವಾಗದ ಕಾರಣ ಚೀನಾ ತನ್ನ ಕೆಲವು ನೀತಿಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ. ಟರ್ಕಿ, […]

KPTCL ಸೇರಿ ವಿದ್ಯುತ್ ನಿಗಮಗಳ ಮೇಲಿದೆ 38,973 ಕೋಟಿ ಸಾಲ

ಬೆಂಗಳೂರು,ಸೆ.19-ಕೆಪಿಟಿಸಿಎಲ್ ಸೇರಿದಂತೆ ವಿವಿಧ ವಿದ್ಯುತ್ ಪ್ರಸರಣ ನಿಗಮಗಳು 2002ರಿಂದ ಈವರೆಗೂ 38,973 ಕೋಟಿ ರೂ. ಸಾಲ ಮಾಡಿದ್ದು, ಅದು 2040ರ ವೇಳೆಗೆ ತೀರುವಳಿಯಾಗಲಿದೆ ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ತಿಳಿಸಿದರು. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಪಿಟಿಸಿಎಲ್ 9,590.99 ಕೋಟಿ, ಬೆಸ್ಕಾಂ- 13,613.23 ಕೋಟಿ, ಚೆಸ್ಕಾಂ 3536 ಕೋಟಿ, ಮೆಸ್ಕಾಂ- 1282 ಕೋಟಿ, ಹೆಸ್ಕಾಂ- 7480 ಕೋಟಿ, ಜೆಸ್ಕಾಂ 3472 ಕೋಟಿ ಸಾಲ ಪಡೆದಿವೆ. ಇವುಗಳಿಗೆ ಬಡ್ಡಿ ಮತ್ತು ಅಸಲು […]